ಹೊಸದಿಗಂತ ಡಿಜಿಟಲ್ ಡೆಸ್ಕ್:
ಹದಿನೆಂಟು ವರ್ಷಗಳ ಬಳಿಕ ನಮ್ಮ ಆರ್ಸಿಬಿ ತಂಡ ಐಪಿಎಲ್ ಟ್ರೋಪಿ ಗೆದ್ದು ಬಂದ ವೇಳೆಯಲ್ಲಿ ಸಂಭ್ರಮ ಮುಗಿಲು ಮುಟ್ಟಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಮುಖ್ಯಮಂತ್ರಿ @Siddaramaiah ಹಾಗೂ ಉಪ ಮುಖ್ಯಮಂತ್ರಿ @DKShivakumar ಅವರ ಅಸಮರ್ಥ ಆಡಳಿತದಿಂದಾಗಿ ಸಂಭವಿಸಿದ ನೂಕುನುಗ್ಗಲಿನಲ್ಲಿ ಅಮಾಯಕರು ಸಾವನ್ನಪ್ಪಬೇಕಾಯಿತು ಎಂದು ವಿಪಕ್ಷ ಉಪ ನಾಯಕರು ಹಾಗೂ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಆರ್ಸಿಬಿ ತಂಡದ ವಿಜಯಯಾತ್ರೆ, ಕಾಂಗ್ರೆಸ್ ಸರ್ಕಾರದಿಂದ ಶೋಕಯಾತ್ರೆಯಾಗಿ ಪರಿವರ್ತಿತವಾಗಿದೆ. ಈ ಅಮಾಯಕರ ಸಾವುಗಳಿಗೆ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರೇ ನೇರ ಹೊಣೆಗಾರರಾಗಿದ್ದಾರೆ. ವಿಜಯಯಾತ್ರೆಯನ್ನು, ಸನ್ಮಾನ ಸಮಾರಂಭವನ್ನು ಪೂರ್ವ ಸಿದ್ಧತೆಗಳೊಂದಿಗೆ, ಹೆಚ್ಚು ಭದ್ರತೆಯೊಂದಿಗೆ ಸರ್ಕಾರ ಆಯೋಜಿಸಬಹುದಿತ್ತು. ಆದರೆ ರಾಜಕೀಯ ಸ್ವಾರ್ಥಕ್ಕಾಗಿ ಅಮಾಯಕರ ಬಲಿ ಪಡೆದು, ಸರ್ಕಾರ ಬೇಳೆ ಬೇಯಿಸಿಕೊಳ್ಳುತ್ತಿದೆ. ಇಂಥ ಸರ್ಕಾರಕ್ಕೆ ಧಿಕ್ಕಾರವಿರಲಿ! ಆರ್ಸಿಬಿ ತಂಡದ ಅಭಿಮಾನಿಗಳಿಗೆ ನನ್ನದೊಂದು ಮನವಿ. ಗೆಲುವಿನ ಸಂಭ್ರಮದಲ್ಲಿ ಮಿಂದೇಳಿ ಅಡ್ಡಿ ಇಲ್ಲ, ಆದರೆ ಅಭಿಮಾನಿಗಳ ಸಾಗರವೇ ಹರಿದುಬಂದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯಿಂದ ಇರಿ. ನಿಮ್ಮ ಮನೆಗಳಲ್ಲಿ ನಿಮಗಾಗಿ ಕಾಯುತ್ತಿರುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದ್ದಾರೆ.