March 13, 2026
Friday, March 13, 2026
spot_img

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧಾನಗೆ ವರ್ಷದ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧಾನಾಗೆ ಸ್ಪೋರ್ಟ್ಸ್‌ವುಮೆನ್‌ ಆಫ್‌ ದಿ ಇಯರ್‌ ಪ್ರಶಸ್ತಿ ಸಂದಿದೆ.

ಈ ವರ್ಷದ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸ್ಮೃತಿ ಮಂಧಾನಾ ಭಾಜನರಾಗಿದ್ದು, ಕ್ರೀಡಾಭಿಮಾನಿಗಳಿಗೆ ಖುಷಿಯಾಗಿದೆ.

ಈ ವರ್ಷದ ಮೊದಲಿನಲ್ಲೇ ತಮ್ಮ ಖಾಸಗಿ ಬದುಕಿನಲ್ಲಿ ಸಮಸ್ಯೆಗಳನ್ನು ಅನುಭವಿಸಿದ ಸ್ಮೃತಿಗೆ ಮತ್ತೊಂದು ಬೂಸ್ಟ್‌ ಸಿಕ್ಕಂತೆ ಆಗಿದೆ. ಭಾರತ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಮೃತಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಎರಡು ಬಾರಿ ಗೆಲ್ಲಿಸಿದ್ದಾರೆ.

29 ವರ್ಷದ ಮಂಧಾನ, 2025 ರ ಐಸಿಸಿ ಮಹಿಳಾ ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ಭಾರತದ ಉಪನಾಯಕಿಯಾಗಿದ್ದರು. ಜತೆಗೆ ಟೂರ್ನಿಯಲ್ಲೇ ಅತ್ಯಧಿಕ (434) ರನ್‌ಗಳನ್ನು ಗಳಿಸಿದ ಆಟಗಾರ್ತಿಯಾಗಿದ್ದರು.

ವರ್ಷದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ನನಗೆ ನೀಡಿದ್ದಕ್ಕಾಗಿ ಬಿಬಿಸಿಗೆ ಧನ್ಯವಾದಗಳು. 2025, ಮಹಿಳಾ ಕ್ರಿಕೆಟ್‌ಗೆ ವಿಶೇಷ ವರ್ಷವಾಗಿತ್ತು. ವಿಶೇಷವಾಗಿ ಭಾರತವು ಹಲವು ಪಂದ್ಯಗಳನ್ನು ಗೆಲ್ಲಲು ನಾನು ನೀಡಿದ ಕೊಡುಗೆ ಬಗ್ಗೆ ನನಗೆ ಸಂತೋಷವಾಗಿದೆ ಎಂದು ಮಂಧಾನ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !