Thursday, December 18, 2025

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಸ್ಟಾರ್ ಜೋಡಿ? ಜೈಪುರದಲ್ಲಿ ಮದುವೆ, ಶ್ರೀಲಂಕಾದಲ್ಲಿ ಬ್ಯಾಚುಲರ್ ಪಾರ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಖ್ಯಾತರಾಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೇಮ ಪುರಾಣ ಈಗ ಕೇವಲ ಗುಟ್ಟಾಗಿ ಉಳಿದಿಲ್ಲ. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿರುವ ಈ ಜೋಡಿ, ಕೆಲ ತಿಂಗಳ ಹಿಂದಷ್ಟೇ ಯಾರಿಗೂ ತಿಳಿಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಇದೀಗ ಈ ಜೋಡಿಯ ಮದುವೆಯ ಕುರಿತು ಮತ್ತೊಂದು ಬಿಸಿ ಬಿಸಿ ಸುದ್ದಿ ಹೊರಬಿದ್ದಿದೆ.

ಮೂಲಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ಬರುವ ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ಥಾನದ ಸಾಂಸ್ಕೃತಿಕ ನಗರಿ ಜೈಪುರದಲ್ಲಿ ಅತ್ಯಂತ ವೈಭವೋಪೇತವಾಗಿ ಇವರ ವಿವಾಹ ಮಹೋತ್ಸವ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಇಬ್ಬರೂ ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಶೂಟಿಂಗ್ ಮುಗಿದ ತಕ್ಷಣ ಮದುವೆಯ ಸಿದ್ಧತೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಮದುವೆಗೆ ಮುನ್ನ ಆಪ್ತ ಗೆಳೆಯರ ಜೊತೆ ಸಂಭ್ರಮಿಸುವುದು ಇಂದಿನ ಟ್ರೆಂಡ್. ಅದರಂತೆ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಆಪ್ತ ಗೆಳತಿಯರ ತಂಡದೊಂದಿಗೆ ಶ್ರೀಲಂಕಾಗೆ ಹಾರಿದ್ದಾರೆ. ಅಲ್ಲಿನ ಸುಂದರ ಬೀಚ್‌ಗಳು ಹಾಗೂ ಐಶಾರಾಮಿ ರೆಸಾರ್ಟ್‌ಗಳಲ್ಲಿ ಉಳಿದುಕೊಂಡು ಭರ್ಜರಿಯಾಗಿ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಇದರ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಶ್ಮಿಕಾ ಮದುವೆಯ ತಯಾರಿ ನಡೆಸುತ್ತಿರುವುದಕ್ಕೆ ಇದು ಸಾಕ್ಷಿ ಎಂಬಂತಿದೆ.

ತಮ್ಮ ಮತ್ತು ವಿಜಯ್ ನಡುವಿನ ಸಂಬಂಧದ ಬಗ್ಗೆ ರಶ್ಮಿಕಾ ಮಂದಣ್ಣ ಇತ್ತೀಚಿನ ಸಂದರ್ಶನಗಳಲ್ಲಿ ಪರೋಕ್ಷವಾಗಿ ಮಾತನಾಡುತ್ತಲೇ ಬಂದಿದ್ದಾರೆ. ಅಭಿಮಾನಿಗಳ ಕುತೂಹಲಕ್ಕೆ ತೆರೆ ಬೀಳುವ ಸಮಯ ಹತ್ತಿರವಾಗಿದ್ದು, ಶೀಘ್ರದಲ್ಲೇ ಈ ಸ್ಟಾರ್ ಜೋಡಿಯ ಕಡೆಯಿಂದ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

error: Content is protected !!