ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧ್ಯಾತ್ಮಿಕ ವಿಷಯವನ್ನಾಧರಿಸಿದ ಕನ್ನಡ ಚಿತ್ರ ‘ಕಾಂತಾರ’ ದೊಡ್ಡ ಯಶಸ್ಸನ್ನು ಕಂಡಿದೆ. ಭಾರತದಲ್ಲಿ ಇತರೆ ಭಾಷೆಗಳಲ್ಲೂ ಕೂಡ ಈ ಸಿನಿಮಾ ರಿಲೀಸ್ ಆಗಿದ್ದು, ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ.
ದೇಶಾದ್ಯಂತ ಕಾಂತಾರ ಸಿನಿಮಾದ ಸಂದರ್ಶನಗಳಲ್ಲಿ ಬ್ಯುಸಿಯಾಗಿರುವ ನಾಯಕ ರಿಷಬ್ ಶೆಟ್ಟಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅವರನ್ನು ಭೇಟಿ ಮಾಡಿದ್ದಾರೆ. ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಬಿ ಡಿವಿಲಿಯರ್ಸ್ ಅವರೊಂದಿಗಿನ ವೀಡಿಯೊವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ ಡಿವಿಲಿಯರ್ಸ್ ಮತ್ತು ರಿಷಭ್ ಜೊತೆಗೆ ಕಾಂತಾರ ಎಂದು ಕೂಗಿದ್ದಾರೆ. ಸೂಪರ್‌ಹೀರೋ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ ಎಂದು ರಿಷಭ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಎಲ್ಲಾ ಫಾರ್ಮ್ಯಾಟ್‌ಗಳಿಂದ ನಿವೃತ್ತಿ ಘೋಷಿಸಿದ ಡಿವಿಲಿಯರ್ಸ್ ಈಗ ಈ ಕಾಂತಾರ ಪ್ರಚಾರ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ವೀಡಿಯೊವನ್ನು ಶೇರ್ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.