ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಕಂಪನಿಯ 31 ಮಿಲಿಯನ್‌ಗೂ ಹೆಚ್ಚು ಗ್ರಾಹಕರ ವೈಯಕ್ತಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾವನ್ನು 1.50 ಲಕ್ಷ ಡಾಲರ್ ಗೆ ಮಾರಾಟಕ್ಕೆ ಲಭ್ಯವಿರುವುದಾಗಿ ಹ್ಯಾಕರ್ ಒಬ್ಬ ಹೇಳಿಕೊಂಡಿದ್ದಾನೆ.
xenZen ಎಂದು ಗುರುತಿಸಲಾದ ಹ್ಯಾಕರ್ ಗ್ರಾಹಕರ ಜನ್ಮ ದಿನಾಂಕ, ಫೋನ್ ಸಂಖ್ಯೆ, ಪ್ಯಾನ್ ಕಾರ್ಡ್ ಸೇರಿದಂತೆ ಇತರ ವಿವರಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದರಿಂದ ವಿಮಾ ಕಂಪನಿಯ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ.
ದುರುದ್ದೇಶಪೂರಿತ ಸೈಬರ್ ದಾಳಿಗೆ ಗ್ರಾಹಕರು ಬಲಿಯಾಗಿದ್ದಾರೆ ಪರಿಣಾಮ ಕೆಲವು ಡೇಟಾಗೆ ಅನಧಿಕೃತ ಮತ್ತು ಅಕ್ರಮ ಪ್ರವೇಶವಾಗಿದೆ ಎಂದು ವಿಮಾ ಕಂಪನಿ ಹೇಳಿದೆ. ಎಲ್ಲಾ ಸೇವೆಗಳು ಅಡ್ಡಿಯಿಲ್ಲದೆ ಮುಂದುವರಿಯುತ್ತವೆ ಎಂದು ಸ್ಪಷ್ಪಪಡಿಸುತ್ತೇವೆ. ಸೈಬರ್ ಭದ್ರತೆ ತಜ್ಞರ ನೇತೃತ್ವದಲ್ಲಿ ಸಂಪೂರ್ಣ ಮತ್ತು ಕಠಿಣವಾದ ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ.ತನಿಖೆಯ ಪ್ರತಿಯೊಂದು ಹಂತದಲ್ಲೂ ಸರ್ಕಾರ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.