Saturday, December 27, 2025

CINE | ಪೈರಸಿ ಕಾಟದಲ್ಲಿ ಸ್ಟಾರ್ ಸಿನಿಮಾಗಳು: ಈ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಸೆಂಬರ್ ಎಂದರೆ ಕನ್ನಡ ಚಿತ್ರರಂಗಕ್ಕೆ ಹಿಟ್‌ಗಳ ತಿಂಗಳು ಎಂಬ ನಿರೀಕ್ಷೆ ಇರುತ್ತದೆ. ಈ ಬಾರಿ ಕೂಡ ಡೆವಿಲ್, ಮಾರ್ಕ್ ಮತ್ತು 45 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಲೆಕ್ಕಾಚಾರದಲ್ಲಿದ್ದವು. ಆದರೆ ಚಿತ್ರಮಂದಿರಗಳ ಯಶಸ್ಸಿನ ಮಧ್ಯೆಯೇ ಪೈರೆಸಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನೂರಾರು ಕೋಟಿ ಗಳಿಸಬೇಕಿದ್ದ ಈ ಸಿನಿಮಾಗಳ ಲಿಂಕ್‌ಗಳು ಆನ್‌ಲೈನ್‌ನಲ್ಲಿ ಹರಡುತ್ತಿರುವುದು ಚಿತ್ರತಂಡಗಳನ್ನು ಕಂಗಾಲು ಮಾಡಿದೆ.

ಪೈರೆಸಿ ವಿಚಾರವಾಗಿ ನಟ ಕಿಚ್ಚ ಸುದೀಪ್ ಅವರ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. “ತಡೆಯಲು ಸಾಧ್ಯವಾದಷ್ಟು ತಡೆಯಿರಿ, ಮಾತನಾಡಬೇಕಾದ ಜಾಗದಲ್ಲಿ ಮಾತನಾಡಿ. ಯಾರಿಗೆ ಮುಟ್ಟಬೇಕೋ ಅವರಿಗೆ ಮುಟ್ಟುತ್ತದೆ. ಯಾರಿಗೆ ತಟ್ಟಬೇಕೋ ತಟ್ಟುತ್ತದೆ ಅನ್ನೋ ಸುದೀಪ್ ಮಾತು ಆವತ್ತೆ ಪೈರೆಸಿಗೆ ಅಂದಿದ್ದರೆ ಮುಗಿದೇ ಹೋಗ್ತಿತ್ತು. ಆದರೆ ಇದೇ ಹೇಳಿಕೆ ಸ್ಟಾರ್ ಅಭಿಮಾನಿಗಳ ನಡುವೆ ಬೇರೆ ಅರ್ಥ ಪಡೆದು, ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ವಾಗ್ವಾದಕ್ಕೆ ಕಾರಣವಾಯಿತು.

ಇದನ್ನೂ ಓದಿ:

ಇದೇ ವೇಳೆ ವಿಜಯಲಕ್ಷ್ಮಿ ಮಾಡಿದ ಕೆಲ ಹೇಳಿಕೆಗಳು ಮತ್ತಷ್ಟು ಗೊಂದಲಕ್ಕೆ ದಾರಿ ಮಾಡಿಕೊಟ್ಟವು. ಈ ಬಗ್ಗೆ ಈಗ ಸ್ಪಷ್ಟನೆ ನೀಡಿರುವ ಸುದೀಪ್, ನಾನು ಹೇಳಿರೋ ಮಾತು ಪೈರಸಿ ಬಗ್ಗೆ ಮಾತ್ರ. ತಮ್ಮ ಅಭಿಮಾನಿಗಳು ಅಶ್ಲೀಲ ಕಮೆಂಟ್ ಮಾಡಿದರೆ ಅದನ್ನು ಸಮರ್ಥಿಸುವುದಿಲ್ಲ. ಪೈರೆಸಿ ವಿಷಯದಲ್ಲಿ ಮಾತ್ರ ಕಠಿಣ ನಿಲುವು ಹೊಂದಿರುವ ಅವರು, ಈಗಾಗಲೇ 9,000ಕ್ಕೂ ಹೆಚ್ಚು ಮಾರ್ಕ್ ಚಿತ್ರದ ಪೈರೆಸಿ ಲಿಂಕ್‌ಗಳು ಪತ್ತೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಖಚಿತ ಎಂದು ತಿಳಿಸಿದ್ದಾರೆ.

ಸ್ಟಾರ್ ವಾರ್ ಸುದ್ದಿಗಳ ನಡುವೆ ಪೈರೆಸಿ ವಿರುದ್ಧದ ಹೋರಾಟ ಯಾವ ದಿಕ್ಕು ತಾಳುತ್ತದೆ ಎಂಬುದು ಈಗ ಕಾದು ನೋಡಬೇಕಾದ ಸಂಗತಿ.

error: Content is protected !!