ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕನಸಿನ ‘ವಂದೇ ಭಾರತ್’ ಎಕ್ಸ್ಪ್ರೆಸ್ (Vandre Bharat) ರೈಲುಗಳು ಈಗಾಗಲೇ ಆರಂಭವಾಗಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ.
ಇದೀಗ ‘ವಂದೇ ಭಾರತ್’ ಯಶಸ್ಸಿನ ಬೆನ್ನಿಗೇ ರೈಲ್ವೆ ಇಲಾಖೆಗೆ (Indian Railways) ಪ್ರಧಾನಿ ಪ್ರಧಾನಿ ಮತ್ತೊಂದು ಮಹತ್ವದ ಸೂಚನೆ ನೀಡಿದ್ದಾರೆ.
ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೈದರಾಬಾದ್ನಲ್ಲಿ ಮಾಹಿತಿ ನೀಡಿದ್ದು, ‘ಎರಡು ಪ್ರಮುಖ ನಗರಗಳನ್ನು ಬೆಸೆಯುವ ‘ವಂದೇ ಮೆಟ್ರೊ’ ರೈಲುಗಳನ್ನು ಆರಂಭಿಸುವಂತೆ ಮೋದಿ ಸೂಚನೆ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಆಹಾರ ಧಾನ್ಯ, ರಸಗೊಬ್ಬರ ಮತ್ತು ಇತರ ಅತ್ಯಗತ್ಯ ವಸ್ತುಗಳ ಸಾಗಾಟಕ್ಕೆಂದು ಭಾರತೀಯ ರೈಲ್ವೆಯು ₹ 59,000 ಕೋಟಿಗಳಷ್ಟು ಸಹಾಯಧನ ಒದಗಿಸಿದೆ. ಇದು ಎಲ್ಲ ಪ್ರಯಾಣಿಕರಿಗೆ ಶೇ 55ರಷ್ಟು ರಿಯಾಯ್ತಿ ಕೊಟ್ಟಂತೆ ಆಗುತ್ತದೆ’ ಎಂದು ತಿಳಿಸಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ನಮಗೆ ಟಾರ್ಗೆಟ್ ಕೊಟ್ಟಿದ್ದಾರೆ. ವಂದೇ ಭಾರತ್ ರೈಲುಗಳ ಯಶಸ್ಸಿನ ನಂತರ ಭಾರತದಲ್ಲಿ ವಿಶ್ವಮಟ್ಟದ ಪ್ರಾದೇಶಿಕ ರೈಲುಗಳನ್ನು ಆರಂಭಿಸಲು ಹೇಳಿದ್ದಾರೆ. ಅವನ್ನು ವಂದೇ ಮೆಟ್ರೋ ಹೆಸರಿನಡಿ ಪರಿಚಯಿಸಲಾಗುವುದು’ ಎಂದು ಹೇಳಿದರು.
ಮುಂದಿನ 12ರಿಂದ 16 ತಿಂಗಳಲ್ಲಿ ಇದರ ಪ್ರಾಯೋಗಿಕ ಮಾದರಿಗಳನ್ನು ಪರಿಚಯಿಸಲಾಗುವುದು. ಪ್ರಾಯೋಗಿಕವಾಗಿ ಕನಿಷ್ಠ 1 ವರ್ಷ ಓಡಿಸಲಾಗುವುದು. ನಂತರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ರೈಲುಗಳು ಗರಿಷ್ಠ 100 ಕಿಮೀ ಅಂತರದ ಒಳಗಿರುವ ಎರಡು ಪ್ರಮುಖ ನಗರಗಳ ನಡುವೆ ಅತ್ಯಂತ ವೇಗವಾಗಿ ಸಂಚರಿಸಲಿವೆ. ಯೂರೋಪ್ನಲ್ಲಿ ಇಂಥ ರೈಲುಗಳನ್ನು ‘ರೀಜನಲ್ ಟ್ರಾನ್ಸ್’ (Regional Trans) ಎನ್ನುತ್ತಾರೆ ಎಂದರು.