ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾರಂಭಿಸಿದ್ದು, ಆರಂಭದಲ್ಲಿ ಕುವೆಂಪು, ಬಸವಣ್ಣನವರನ್ನು ನೆನಪಿಸಿದರು.
ಭಾಷಣದಲ್ಲಿ ಗಿರೀಶ್ ಕಾರ್ನಾಡ್ರ ‘ಯಯಾತಿ’ ನಾಟಕದ ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು. ಆದರೆ ಕನಸುಗಳು ಇಲ್ಲದೆ ಹಾದಿಯಲ್ಲಿ ಹೇಗೆ ನಡೆಯಲಿʼ ಎಂಬ ಸಾಲುಗಳನ್ನು ಸ್ಮರಿಸಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸಿದರು.