ಹೊಸ ದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಗೆ ಪ್ರತ್ಯೇಕ ವಿಶೇಷ ಕೊಡುಗೆಗಳೇನು ಸಿಕ್ಕಿಲ್ಲ. ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಆಗಿಲ್ಲ. ತೆಂಗು ಬೆಳೆಗಾರರ ಹಿತ ಕಾಯುವಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ತುಮಕೂರು ಬಿಜೆಪಿ ಖಜಾಂಚಿ ಡಾ.ಎಸ್.ಪರಮೇಶ್ ಹೇಳಿದ್ದಾರೆ.
ಹೇಳಿಕೆ ನೀಡಿರುವ ಅವರು , ಗ್ಯಾರಂಟಿ ಗಳ ಹೊರೆ ತಗ್ಗಿಸಿಕೊಳ್ಳಲು ಜನರ ಮೇಲೆ ತೆರಿಗೆ ಭಾರ ಹಾಕಲಾಗಿದೆ. ಪ್ರಗತಿಯ ದೂರದೃಷ್ಟಿ ಯಿಲ್ಲದ ಒಂದು ವರ್ಗದ ಜನರನ್ನು ತುಷ್ಟೀಕರಿಸಿ ಮತಬ್ಯಾಂಕ್ ಗಟ್ಟಿ ಗೊಳಿಸಿಕೊಳ್ಳುವ ಆಯವ್ಯಯ ಇದಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರು 14ನೇ ಬಾರಿಗೆ ಮಂಡಿಸಿದ ಬಜೆಟ್ ಅವರ ಹೆಸರಿಗಷ್ಟೇ ಚಾರಿತ್ರಿಕ ಎನಿಸಿದೆ ಹೊರತು ಕನ್ನಡಿಗರ ಪಾಲಿಗೆ ಮಹತ್ವವೆನಿಸಿಲ್ಲ ಎಂದು ಹೇಳಿದ್ದಾರೆ.