ಬರಗಾಲದ ಬವಣೆ ಜಲಕ್ಷಾಮ ನಿರ್ಲಕ್ಷಿಸಿದ ರಾಜ್ಯ ಸರ್ಕಾರದ ಬಜೆಟ್ : ಮಹದೇವಯ್ಯ ಕರದಳ್ಳಿ

ಹೊಸದಿಗಂತ ವರದಿ ಕಲಬುರಗಿ:

ಇಡೀ ರಾಜ್ಯದಲ್ಲಿ ಬರಗಾಲದ ಬಿಸಿ ದಿನೇ ದಿನೇ ಏರುತ್ತಿದೆ ಕುಡಿಯುವ ನೀರಿನ ಕೊರತೆ ಕಾಡುತ್ತಿದ್ದು,ರಾಜ್ಯ ಸರ್ಕಾರ ಬರುವಂತಹ ಬರಗಾಲದ ಕುರಿತು ಕ್ರಮ ಕೈಗೊಳ್ಳಬೇಕಿತ್ತು.ಆದರೆ, ಅದು ಆಗಿಲ್ಲ . ಹೀಗಾಗಿ ಬರಗಾಲದ ಬವಣೆ ,ಜಲಕ್ಷಾಮವನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ರಾಷ್ಟ್ರೀಯ ಸ್ವದೇಶಿ ವಿಚಾರಗಳ ಚಿಂತಕ ಮಹದೇವಯ್ಯ ಕರದಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿದ ಅವರು,ನೀರಿನ ಸಮಸ್ಯೆಯನ್ನು ಎದುರಿಸಲು ರಾಜ್ಯ ಸರ್ಕಾರದ ಸಿದ್ಧತೆ ಕುರಿತು ಬಜೆಟ್ ದಿವ್ಯ ನಿರ್ಲಕ್ಷ್ಯತಾಳಿದೆ. ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ರಾಜ್ಯದ ಜನತೆ ಅದರಲ್ಲೂ ಕಲ್ಯಾಣ ಕರ್ನಾಟಕದ ಜನತೆ ಮೌನವಾಗಿದೆ. ಶಾಸಕರು ಬರಗಾಲ ಎದುರಿಸುವ ತುರ್ತು ಕ್ರಮಗಳಿಗೆ ಜಿಲ್ಲಾವಾರು ವಿಶೇಷ ಅನುದಾನದ ಬೇಡಿಕೆ ಇಡಬೇಕಿತ್ತು ಎಂದು ತಿಳಿಸಿದರು.

ನೀರು ಹಿಡಿಯಲು ಸಂಗ್ರಹಿಸಲು ಬಡಿದಾಡುವ ಜನ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಹ ಬರಲಿಕ್ಕಿಲ್ಲ. ಬ್ರಿಡ್ಜ ಕಂ ಬ್ಯಾರೇಜ 115 ಕಾಮಗಾರಿಗಳಿಗೆ 200 ಕೋಟಿ, ಕೆಸಿ ವ್ಯಾಲಿ 2ನೇ ಹಂತದ 272 ಕೆರೆ ತುಂಬಿಸುವ ಯೋಜನೆ (ಮೊತ್ತ ನಿಗದಿ ಪಡಿಸಲಿಲ್ಲ) , ಮಾನ್ವಿ, ಕೆ ಆರ್ ನಗರ, ನಂಜನಗೂಡು, ಚಿತ್ತಾಪೂರು, ಸೊರಬ,ಜೇವರ್ಗಿ , ಕುಕನೂರು ಮುಂತಾದ ತಾಲ್ಲೂಕಿನ ಕೆರೆ ತುಂಬಿಸಲು 850 ಕೋಟಿ ಅಂದಾಜು ಮೊತ್ತ ನಿಗದಿ ಪಡಿಸಿದ್ದು, ಬಕಾಸುರ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತಾಗಿದೆ ಎಂದು ಹೇಳಿದರು.

ತುರ್ತು ಬದುಕಲು ಅವಶ್ಯಕ ಜೀವ ಜಲ ಕೇಳುವುದು ಬಿಟ್ಟು ಅದು ಬಿಟ್ಟು ಅದು ಆಗಿಲ್ಲ ಇದು ಆಗಿಲ್ಲ ಎಂದು ಬಜೆಟ್ ವಿಶ್ಲೇಷಣೆ ಮಾಡುವುದು ಬಿಕ್ಷುಕನ ಹಗಲು ಕನಸು ಆಗುತ್ತದೆ. ಒಂದೆಡೆ ಬಿಸಿಲಿನ ಬಿಸಿ, ನೀರಿನ ಕೊರತೆಗಳಿಂದ ದನಕರುಗಳಂತಿರಲಿ ಜನರೇ ಬದುಕುವುದು ಕಷ್ಟಸಾಧ್ಯ ಎಂದು ವಾಖ್ಯಾನ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here