ರಾಜ್ಯ ಸರ್ಕಾರ ಹಣದ ಜತೆಗೆ ರಾಗಿ, ಜೋಳ ಕೊಡಬೇಕು: ನಟ ಚೇತನ್

ಹೊಸದಿಗಂತ ವರದಿ,ಕಲಬುರಗಿ:

ರಾಜ್ಯ ಸರಕಾರ ಅಕ್ಕಿ ಬದಲು ಹಣ ಕೊಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನುಡಿದಂತೆ ನಡೆಯಬೇಕು.
ಸರಕಾರ ಅಕ್ಕಿ ಬದಲು ಹಣದ ಜತೆಗೆ ರಾಗಿ, ಜೋಳವು ಕೊಡಬೇಕು ಎಂದು ನಟ ಚೇತನ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರ ಬೇರೆ ರಾಜ್ಯದ ಮೊರೆ ಹೋಗುತ್ತಿದೆ. ಆದರೆ, ರಾಜ್ಯದಲ್ಲಿ
ನಮ್ಮ ರೈತರನ್ನು ಬೆಳೆಸುವ‌ ಕೆಲಸವಾಗಬೇಕಿದೆ. ಹೀಗಾಗಿ ರಾಜ್ಯದ ರೈತರಿಂದ ಜೋಳ, ರಾಗಿ ಖರೀದಿಸಿ ಜನರಿಗೆ ನೀಡಬೇಕು ಎಂದರು.

ಸಚಿವ ಕೆಜೆ ಜಾರ್ಜ್ ಬಡವರಿಗೆ ದುಡ್ಡು ಬೇಡ ಅಂತಾರೆ ಆದರೆ, ಸರಕಾರ ದುಡ್ಡು, ರಾಗಿ, ಜೋಳ ಎಲ್ಲವನ್ನೂ ‌ಕೊಡಬೇಕು. ಸಚಿವ ಜಾರ್ಜ್ ಒಬ್ಬ ಶ್ರೀಮಂತ ವ್ಯಕ್ತಿ. ಈ ರೀತಿಯ ‌ಮಾತಾಡೋದು ಅವರಿಗೆ ಶೋಭೆ ತರೋದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!