ಹೊಸದಿಗಂತ ವರದಿ ಹಾವೇರಿ:
ರಾಜ್ಯ ಸರ್ಕಾರ ದಿವಾಳಿಯಾಗಿದೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ರಾಹುತನಕಟ್ಟಿ ಗ್ರಾಮದ ಚಿಕ್ಕಪ್ಪ ದೊಡ್ಡದುರುಗಪ್ ಕಂಬಳಿ ಇವರ ಜಮೀನಿಗೆ ಭೇಟಿ ನೀಡಿ ರೈತರ ಸ್ಥಿತಿಗತಿಯ ಮಾಹಿತಿ ಪಡೆದರು.
ರಾಜ್ಯ ಸರಕಾರದಿಂದ ಪರಿಹಾರ ಬಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಕಳೆದ ಬಾರಿ ಪರಿಹಾರ ಸಕಾಲಕ್ಕೆ ಸಿಕ್ಕಿತ್ತು ಎಂಬ ಕುರಿತು ರೈತನಿಂದ ಮಾಹಿತಿ ಪಡೆದರು.
ರಾಜ್ಯ ಬರ ಅಧ್ಯಯನ ತಂಡದ ಭಾಗವಾಗಿ ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಎರಡು ದಿನ ಪ್ರವಾಸ ಮಾಡಿ ವರದಿಯನ್ನು ರಾಜ್ಯ ಸಮೀತಿಗೆ ಸಲ್ಲಿಸಲಿದ್ದೆವೆ ಎಂದರು.
ಈ ವೇಳೆ ಜಿಲ್ಲಾದ್ಯಕ್ಷ ಸಿದ್ದರಾಜ ಕಲಕೋಟಿ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಕಳಕಪ್ಪ ಬಂಡಿ, ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ ಇತರರು ಇದ್ದರು.