ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೈ ಭಾರತ್‌, ದಿಶಾ ಭಾರತ್‌ ಹಾಗೂ ಈಸ್ಟ್-‌ ವೆಸ್ಟ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಗಳ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ  “ಸ್ವರಾಜ್ಯ ಆಂದೋಲನ ಹಾಗೂ ರಾಷ್ಟ್ರಭಾವ ಜಾಗರಣ” ವಿಚಾರದ ಕುರಿತಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕನ್ನಡ ಮತ್ತು ಇಂಗ್ಲೀಷ್‌ ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.
ಎರಡು ವಿಭಾಗದಲ್ಲಿ ಸ್ಪರ್ಧೆಯು ನಡೆಯಲಿದೆ. ಮೊದಲ ವಿಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು( 9-10ನೇ ತರಗತಿ ಹಾಗೂ ಪ್ರಥಮ- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು) ಭಾಗವಹಿಸಬಹುದು. ಎರಡನೇ ವಿಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು( ಪದವಿ\ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು) ಪಾಲ್ಗೊಳ್ಳಬಹುದಾಗಿದೆ. ಪ್ರತಿ ವಿಭಾಗಕ್ಕೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 7,500 ತೃತೀಯ ಬಹುಮಾನ 5 ಸಾವಿರ ಹಾಗೂ ತಲಾ ಸಾವಿರದಂತೆ 10 ವಿಜೇತರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಜೊತೆಗೆ ಎಲ್ಲಾ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.
ʼಸ್ವರಾಜ್ಯ ಆಂದೋಲನ ಹಾಗೂ ರಾಷ್ಟ್ರಭಾವ ಜಾಗರಣʼ ವಿಚಾರದ ಕುರಿತಂತೆ 2500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಕಂಡ ವಿಳಾಸಕ್ಕೆ 2022ರ ಆಗಸ್ಟ್‌ 15ರ ಒಳಗೆ ಕಳುಹಿಸಿಕೊಡಲು ಕೋರಲಾಗಿದೆ. ಸ್ವ ವಿವರದೊಂದಿಗೆ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್‌ ಪ್ರತಿಯನ್ನು ಕಡ್ಡಾಯವಾಗಿ ಜೊತೆಗಿರಿಸಲು ಸೂಚಿಸಲಾಗಿದೆ.

ಪ್ರಬಂಧ ಕಳುಹಿಸಬೇಕಾದ ವಿಳಾಸ:
ಈಸ್ಟ್‌ ವೆಸ್ಟ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ನಂ.63, ಬಿಇಎಲ್‌ (BEL) ಲೇಔಟ್‌ ನಮೀಪ, ಮಾಗಡಿ ಮುಖ್ಯರಸ್ತೆ ಎದುರು, ವಿಶ್ವನೀಧಮ್(‌VISHWANEEDHAM) ಪೋಸ್ಟ್‌, ಅಂಜನನಗರ (ANJANANAGAR) , ಬೆಂಗಳೂರು- 560091.

ಮಾಹಿತಿಗೆ: 9483150527, 9945201546, 9945426967 ಸಂಪರ್ಕಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!