ಹೊಸದಿಗಂತ ವರದಿ, ವಿಜಯಪುರ:
ನಗರ ಹೊರ ವಲಯ ತೊರವಿ ಬಳಿಯ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ವಿದ್ಯುತ್ ಬಿಲ್ ಶಾಕ್ ತಗಲಿದ್ದು, ವಿವಿ ಕುಲಪತಿಗಳೇ ಸ್ವತಃ ಶಾಕ್ ಆಗುವಂತಾಗಿದೆ.
ವಿದ್ಯುತ್ ದರ ಏರಿಕೆಯಿಂದ ಮಹಿಳಾ ವಿಶ್ವವಿದ್ಯಾಲಯಕ್ಕೆ ಈ ಬಾರಿ 5 ಲಕ್ಷಕ್ಕೂ ಅಧಿಕ ಬಿಲ್ ಬಂದಿದ್ದು, ಬಿಲ್ ಕಂಡು ಕುಲಪತಿಗಳು ಆತಂಕಗೊಳ್ಳುವಂತಾಗಿದೆ. ಬೃಹತ್ ಕ್ಯಾಂಪಸ್ ಹೊಂದಿರುವ ಮಹಿಳಾ ವಿಶ್ವವಿದ್ಯಾಲಯದ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ 3,39,313 ರೂ. ಬಂದಿತ್ತು. ಮೇ ತಿಂಗಳ ಬಿಲ್ 5,06,302 ಲಕ್ಷ ರೂ. ಬಿಲ್ ಬಂದಿದೆ. ವಿವಿಯಲ್ಲಿ ಸೋಲಾರ್ ಸೌಲಭ್ಯವಿದ್ದರೂ ವಿದ್ಯುತ್ ಬಿಲ್ ಮಿತಿಮೀರಿ ಬಂದಿರುವುದು ವಿವಿ ಆಡಳಿತ ಮಂಡಳಿಗೆ ಅಚ್ಚರಿಯಾಗಿದೆ.