ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟಿ ಸಮಂತಾ ಮತ್ತು ಮಾಜಿ ಪತಿ ಅಕ್ಕಿನೇನಿ ನಾಗಚೈತನ್ಯ ಡಿವೋರ್ಸ್ ವಿಚಾರವಾಗಿ ಸುರೇಖಾ ವಿವಾದಾತ್ಮಕ ಹೇಳಿಕೆ ನೀಡಿದ್ದ ತೆಲಂಗಾಣದ ಅರಣ್ಯ ಸಚಿವೆ ಕೊಂಡಾ ಸುರೇಖಾ ಇದೀಗ ಈ ಕುರಿತು ಕ್ಷಮೆ ಕೇಳಿದ್ದಾರೆ.
ಸಚಿವೆ ಕೊಂಡಾ ಸುರೇಖಾರವರು ಮಾಧ್ಯಮದ ಮುಂದೆ, ಸಮಂತಾ ಡಿವೋರ್ಸ್ಗೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರ ಮಾಜಿ ಸಚಿವ ಕೆಟಿ ರಾಮರಾವ್ ಕಾರಣ ಅಂತ ಹೇಳಿದ್ದರು. ಈ ವಿವಾದಾತ್ಮಕ ಹೇಳಿಕೆ ನಟಿ ಸಮಂತಾರಿಗೆ ಬೇಸರ ತರಿಸಿದ್ದಲ್ಲದೆ, ಆಕ್ಷೇಪ ವ್ಯಕ್ತಪಡಿಸಿದ್ದರು. ಅತ್ತ ಅಕ್ಕಿನೇನಿ ಕುಟುಂಬಕ್ಕೂ ಅಚ್ಚರಿಯ ಈ ಹೇಳಿಕೆ ಕಾರಣವಾಗಿತ್ತು. ಆದರೀಗ ಸುರೇಖಾ ತಾನಾಡಿದ ಮಾತನ್ನು ವಾಪಸ್ ಹಿಂಪಡೆದುಕೊಂಡಿದ್ದಾರೆ.
ನಾನು ನಟಿ ಸಮಂತಾ, ನಾಗಾರ್ಜುನ ಕುಟುಂಬಕ್ಕೆ ಮಾತ್ರ ಕ್ಷಮೆ ಕೇಳುತ್ತೇನೆ. ಆದರೆ, ನನ್ನ ವಿರುದ್ಧ ಬಿಆರ್‌ಎಸ್ ನಾಯಕರು ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕೆಟಿಆರ್ ಕೂಡ ಕ್ಷಮಾಪಣೆ ಕೇಳಬೇಕು ಎಂದ ಹೇಳಿದ್ದಾರೆ.
ನಾನು ನಿನ್ನೆ ಭಾವೋದ್ವೇಗಕ್ಕೊಳಗಾಗಿ ಹೇಳಿಕೆ ನೀಡಿದ್ದೆ. ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ನಾನು ಯಾರಿಗೂ ನೋವು ಉಂಟು ಮಾಡಲ್ಲ ಎಂದ ಕೊಂಡ ಸುರೇಖಾ ಹೇಳಿದ್ದಾರೆ.