ಧಾರ್ಮಿಕ ಕೇಂದ್ರಗಳ ಮೇಲೆ ಅಪನಂಬಿಕೆ ಬರುವಂತಹ ಹೇಳಿಕೆ ಖಂಡನೀಯ: ಅಶ್ವತ್ಥನಾರಾಯಣ

ಹೊಸದಿಗಂತ ಮಂಡ್ಯ :

ಧಾರ್ಮಿಕ ಕೇಂದ್ರಗಳ ಮೇಲೆ ಇಂತಹ ಅಪನಂಬಿಕೆ ಬರುವಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧವೂ ತನಿಖೆಯಾಗಬೇಕು. ಅವರು ಹೇಳುವುದೇ ಸತ್ಯ ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪುಣ್ಯ ಸ್ಥಳದಲ್ಲಿ ಅಸ್ತಿಪಂಜರ ಸಿಗುತ್ತೆ. ಅಲ್ಲಿ ತುಂಬಾ ಜನ ಸಾವಾಗಿದೆ. ತನಿಖೆ ಮೂಲಕವೇ ಪ್ರಶ್ನೆಗೆ ಉತ್ತರ ಸಿಗುತ್ತೆ. ನಂಬಿಕೆ ಇಟ್ಟಿರುವ ಪುಣ್ಯ ಭೂಮಿಯಲ್ಲಿ ಅಪನಂಬಿಕೆ ವ್ಯಕ್ತವಾಗುತ್ತಿದೆ. ಸರ್ಕಾರ ತನಿಖೆಗೆ ಅವಕಾಶ ಕಲ್ಪಿಸಿದ್ದು, ಸತ್ಯಾಸತ್ಯತೆ ಹೊರಗೆ ಬರುವಂತಾಗಬೇಕು. 3 ತಿಂಗಳೊಳಗೆ ತನಿಖೆ ಮುಗಿಸಿ ವರದಿ ಸಲ್ಲಿಸಲಿ ಎಂದು ಒತ್ತಾಯಿಸಿದರು.

ನಂಬಿಕೆ ಕೇಂದ್ರದ ಮೇಲೆ ಪಿಎಫ್‌ಐ, ಎಸ್‌ಎಫ್‌ಐನಂತಹ ಸಂಘಟನೆಗಳು ಮಾತನಾಡಲು ಪ್ರಾರಂಭಿಸಿವೆ. ಅದೆಲ್ಲವೂ ನಿವಾರಣೆಯಾಗಿ, ಧರ್ಮಸ್ಥಳಕ್ಕೆ ಸತ್ಯ ಹೊರಗೆ ಬರಲಿ ಎಂದು ಆಗ್ರಹಿಸಿದರು.

ಇದು ವ್ಯವಸ್ಥಿತವಾಗಿ ಕಂಡಂತಿದೆ. ಅನಾಮಿಕ ವ್ಯಕ್ತಿಯ ಮೇಲೂ ತನಿಖೆ ಆಗಬೇಕು. ಕೊಲೆ ಅಥವಾ ಬೇರೆ ನಡೆದಿದೆಯಾ ಎಂಬುದರ ಬಗ್ಗೆ ನಿಜವೋ, ಸುಳ್ಳೋ ತಿಳಿಯದು. ಅವನ ಹಿಂದೆ ಯಾರಿದ್ದಾರೆ, ಆತನಿಗೆ ಯಾರು ಹಣ ಕೊಡುತ್ತಿದ್ದಾರೆ, ಈ ರೀತಿಯ ಅಪಾದನೆ ಬಗ್ಗೆ ತನಿಖೆ ಆಗಬೇಕು. ಸುಳ್ಳು ಹೇಳುವಂತಹ ಇಂತಹ ಕೃತ್ಯಗಳ ಹಿಂದೆ ಯಾರಿದ್ದಾರೆ, ಅದರ ಬಗ್ಗೆಯೂ ತನಿಖೆ ಆಗಬೇಕು. ಎಲ್ಲೋ ಒಂದು ಕಡೆ ಇಂತಹ ಧಾರ್ಮಿಕ ಸ್ಥಳಗಳಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!