ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯದ ಮೊದಲ ಆಪಲ್ ಲ್ಯಾಬ್ ಸ್ಥಾಪನೆಯಾಗಿದೆ. 35 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಆಪಲ್ ಕಂಪ್ಯೂಟರ್ ಪ್ರಯೋಗಾಲಯ ನಿರ್ಮಾಣವಾಗಿದ್ದು, ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಬ್‌ನಲ್ಲಿ ಆಪಲ್ ಸಾಫ್ಟ್‌ವೇರ್ ಪ್ರೋಗ್ರಾಂ ತರಬೇತಿ ಸಿಗಲಿದೆ.
ಇದರಿಂದಾಗಿ ವಿಶ್ವದ ವಿವಿಧೆಡೆ ನೌಕರಿ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತದೆ. ಅಮೆರಿಕನ್ ಕಂಪನಿಯಾದ ಕೂಪರ್‌ಟಿನೋ ಪ್ರಮಾಣೀಕರಿಸಿದ ಲ್ಯಾಬ್‌ನಲ್ಲಿ ಆಪಲ್ ತಾಂತ್ರಿಕ ಜ್ಞಾನ ನೀಡಲಾಗುತ್ತದೆ.
ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಓದುವ ವಿದ್ಯಾರ್ಥಿಗಳು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಉದ್ಯೋಗಾವಕಾಶ ಪಡೆಯಲು ಇಲ್ಲಿ ಅವಕಾಶವಿದೆ. ವಾರಕ್ಕೆ ಎರಡು ದಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.