ಹೊನ್ನಾವರದಲ್ಲಿ ರಾಜ್ಯದ ಮೊದಲ ಸಮುದ್ರ ಅಭಯಾರಣ್ಯ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊನ್ನಾವರದಲ್ಲಿ ದೇಶದ ಏಳನೆಯ, ರಾಜ್ಯದ ಮೊದಲ ಸಮುದ್ರ ಅಭಯಾರಣ್ಯ ಘೋಷಣೆ ಮಾಡಲಾಗಿದೆ.

ಹೊನ್ನಾವರದ ಅಪ್ಸರಕೊಂಡದಿಂದ ಮುಗಳಿ, ಮಂಡಿಮಡಿಯವರೆಗಿನ ಆರು ಕಿ.ಮೀ ಉದ್ದದ ಕಡಲತೀರವ ಹಾಗೂ ದಂಡೆಯ ಪ್ರದೇಶವನ್ನು ಸಮುದ್ರ ಅಭಯಾರಣ್ಯವನ್ನಾಗಿ ಘೋಷಣೆ ಮಾಡಲಾಗಿದೆ.

5960 ಹೆಕ್ಟೇರ್‌ ಪ್ರದೇಶ ಇರುವ ಅಭಯಾರಣ್ಯದಲ್ಲಿ 835.05 ಹೆಕ್ಟೇರ್‌ ಸಮುದ್ರ ಹಾಗೂ 835 ಹೆಕ್ಟೇರ್‌ ಭೂ ಪ್ರದೇಶವಾಗಿದೆ. ಇಲ್ಲಿ ಅಳಿವನಂಚಿನಲ್ಲಿರುವ ಪ್ರಬೇಧಗಳು ವಾಸವಾಗಿವೆ.

ಈ ಅಭಯಾರಣ್ಯ ಪ್ರಸ್ತಾವನೆಯನ್ನು ಬಿ.ಎಸ್‌. ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಒಪ್ಪಲಾಗಿತ್ತು. ಅಷ್ಟೇ ಅಲ್ಲದೆ ಬಜೆಟ್‌ನಲ್ಲಿ ಒಂದು ಕೋಟಿ ರೂ. ಕೂಡ ಘೋಷಣೆಯಾಗಿತ್ತು. ಆದರೆ ಕೊರೋನಾ ಕಾರಣದಿಂದ ಎಲ್ಲವೂ ನಿಧಾನವಾಗಿತ್ತು.

ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದ ವನ್ಯಜೀವಿ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದೆ. ಮಂತ್ರಿಮಂಡಲವೂ ಇದಕ್ಕೆ ಅನುಮೋದನೆ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!