ಇಡೀ ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಾಗುತ್ತಲೇ ಇದೆ, ಜನ ಹೀಟ್ ಸ್ಟ್ರೋಕ್, ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮ್ಮರ್‌ನಿಂದ ಯಾವುದೇ ಸಮಸ್ಯೆ ಆಗದಂತೆ ಹೀಗೆ ಲೈಫ್‌ಸ್ಟೈಲ್ ರೂಢಿಸಿಕೊಳ್ಳಿ.
ಡೈರೆಕ್ಟ್ ಸೂರ್ಯ ಕಿರಣಗಳಿಗೆ ಒಡ್ಡಿಕೊಳ್ಳಬೇಡಿ, ಪದೇ ಪದೆ ಸನ್‌ಸ್ಕ್ರೀನ್ ಹಚ್ಚು, ತಲೆಗೆ ಟೋಪಿ ಹಾಕಿ, ಆಗಾಗ ನೆರಳಿಗೆ ನಿಂತು ನೀರು ಕುಡಿಯಿರಿ, ಲೂಸಾದ ಕಾಟನ್ ಬಟ್ಟೆ ಹಾಕಿ.
ತಣ್ಣೀರಿನ ಸ್ನಾನ, ಆಗಾಗ ತಣ್ಣೀರಿನಲ್ಲಿ ಮುಖ ತೊಳೆಯಿರಿ, ಚರ್ಮವನ್ನು ಕೂಲ್ ಆಗಿ ಇಟ್ಟುಕೊಳ್ಳಿ.
ನೀರು ಕುಡಿಯೋದು ಎಲ್ಲದಕ್ಕೂ ಬೆಸ್ಟ್ ಸೊಲ್ಯೂಷನ್ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೈಡ್ರೇಟ್ ಆಗಿ, ಜ್ಯೂಸ್, ಹಣ್ಣು, ನೀರು ಕುಡಿಯುತ್ತಲೇ ಇರಿ.
ಮದ್ಯಪಾನ ಬಿಟ್ಟುಬಿಡಿ, ಬಿಡಲು ಆಗದೇ ಇದ್ದರೆ ಲಿಮಿಟ್ ಆಗಿ ಸೇವಿಸಿ.
ಹಣ್ಣು, ತರಕಾರಿ, ಕಡಿಮೆ ಮಸಾಲಾ ಇರುವ ಊಟ ಪ್ರಿಫರ್ ಮಾಡಿ. ಸೂಪ್, ಜ್ಯೂಸ್, ಗಂಜಿ ಈ ರೀತಿ ಲಿಕ್ವಿಡ್ ಆಹಾರ ತಿನ್ನಿ
ಅತಿಯಾದ ಫಿಸಿಕಲ್ ಆಕ್ಟಿವಿಟಿ ಬೇಡ, ಬಿಸಿಲಿನಲ್ಲಿ ಅಂತೂ ಬೇಡ್ವೇ ಬೇಡ.