ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅರ್ಷದ್ ವಾರ್ಸಿ ಹಾಗೂ ಅವರ ಪತ್ನಿ ಮಾರಿಯಾ ಗೊರೆಟ್ಟಿ ಅವರನ್ನು ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ಒಂದು ವರ್ಷ ನಿರ್ಬಂಧಿಸಿ ಸೆಬಿ ಕ್ರಮ ತೆಗೆದುಕೊಂಡಿದೆ.
ಅರ್ಷದ್ ವಾರ್ಸಿ ದಂಪತಿ ಮಾತ್ರವಲ್ಲ, ಇನ್ನೂ 57 ಸಂಸ್ಥೆಗಳನ್ನು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ನಿರ್ಬಂಧಿಸಲಾಗಿದೆ
ಅಮಾಯಕ ಹೂಡಿಕೆದಾರರನ್ನು ದಾರಿತಪ್ಪಿಸುವಂತಹ ವಿಡಿಯೋ ಪ್ರಸಾರದ ಆರೋಪದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಅರ್ಷದ್ ವಾರ್ಸಿ ಬಾಲಿವುಡ್ನಲ್ಲಿ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಇವರು ಸಾಧನಾ ಬ್ರಾಡ್ಕ್ಯಾಸ್ಟ್ ಎನ್ನುವ ಕಂಪನಿಯ ಷೇರುಮಾರುಕಟ್ಟೆ ಸ್ಕ್ಯಾಮ್ನಲ್ಲಿ ತಳುಕುಹಾಕಿಕೊಂಡಿದ್ದರು. ಇವರು ಹಾಗೂ ಪತ್ನಿ ಮಾರಿಯಾ ಅವರಿಗೆ ತಲಾ 5 ಲಕ್ಷ ರೂ ದಂಡವನ್ನು ಸೆಬಿ ವಿಧಿಸಿದೆ.
ಸಾಧನಾ ಬ್ರಾಡ್ಕ್ಯಾಸ್ಟ್ ಕರ್ಮಕಾಂಡದಲ್ಲಿ ಅರ್ಷದ್ 41.70 ಲಕ್ಷ ರೂ ಹಾಗೂ ಪತ್ನಿ 50.35 ಲಕ್ಷ ರೂ ಲಾಭ ಮಾಡಿದ್ದಾರೆ ಎನ್ನುವುದು ಸೆಬಿ ಆರೋಪ. ಇವರಿಬ್ಬರನ್ನೂ 1 ವರ್ಷ ಕಾಲ ಷೇರು ವ್ಯವಹಾರದಿಂದ ನಿರ್ಬಂಧಿಸಲಾಗಿದೆ. ಇತರ 57 ಮಂದಿ ಹಾಗು ಸಂಸ್ಥೆಗಳಿಗೆ 5 ಲಕ್ಷ ರೂನಿಂದ 5 ಕೋಟಿ ರೂವರೆಗೆ ದಂಡ ವಿಧಿಸಲಾಗಿದೆ.