ಹೊಸದಿಗಂತ ಡಿಜಿಟಲ್ ಡೆಸ್ಕ್:
ದುರ್ಬಲ ಜಾಗತಿಕ ಸೂಚನೆಗಳು ಮತ್ತು ಕಡಿಮೆ ವಿದೇಶಿ ಹರಿವಿನ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಗುರುವಾರ ಕೆಳಮಟ್ಟಕ್ಕೆ ಇಳಿದಿವೆ. ಪ್ರಮುಖ ಸೂಚ್ಯಂಕಗಳಾದ ನಿಫ್ಟಿ 50ಯು 50 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 17,450 ಮಟ್ಟಕ್ಕಿಂತ ಕೆಳಗೆ ವಹಿವಾಟು ನಡೆಸಿತು ಮತ್ತು ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 200 ಪಾಯಿಂಟ್‌ಗಳಷ್ಟು ಕುಸಿದು 58,873 ಮಟ್ಟದಲ್ಲಿ ವಹಿವಾಟು ನಡೆಸಿತು.
ವಿಶಾಲ ಮಾರುಕಟ್ಟೆಗಳಲ್ಲಿ ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇಕಡಾ 0.8 ರಷ್ಟು ಕುಸಿದಿವೆ. ನಿಫ್ಟಿ ಆಟೋ, ನಿಫ್ಟಿ ಮೆಟಲ್ ಮತ್ತು ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಸೂಚ್ಯಂಕಗಳು ಶೇಕಡಾ 1 ಕ್ಕಿಂತ ಹೆಚ್ಚು ಕುಸಿದಿವೆ.
ಟಾಪ್ ಗೇನರ್ಸ್ & ಟಾಪ್ ಲೂಸರ್ಸ್:
ನೆಸ್ಲೆ ಇಂಡಿಯಾ, ಎಚ್‌ಯುಎಲ್, ಐಟಿಸಿ, ಎಚ್‌ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಟಾಪ್ ಗೇನರ್ ಆಗಿ ಹೊರಹೊಮ್ಮಿವೆ.
ಇಂಡಸ್‌ಇಂಡ್ ಬ್ಯಾಂಕ್, ಹಿಂಡಾಲ್ಕೊ, ಬಜಾಜ್ ಆಟೋ, ಕೋಲ್ ಇಂಡಿಯಾ ಮತ್ತು ಟಾಟಾ ಮೋಟಾರ್ಸ್ ಷೇರುಗಳು ನಷ್ಟ ಅನುಭವಿಸಿವೆ.