April 10, 2026
Friday, April 10, 2026
spot_img

ಯುದ್ಧದ ಕಿಚ್ಚಿಗೆ ನಡುಗಿದ ಷೇರು ಮಾರುಕಟ್ಟೆ: ಕಚ್ಚಾ ತೈಲ ಬೆಲೆ ಏರಿಕೆ, ಹೂಡಿಕೆದಾರರಲ್ಲಿ ಆತಂಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಸಂಭ್ರಮದಲ್ಲಿದ್ದ ಭಾರತೀಯ ಹೂಡಿಕೆದಾರರಿಗೆ ಗುರುವಾರ ಕಹಿ ಸುದ್ದಿ ಎದುರಾಗಿದೆ. ಜಾಗತಿಕ ಯುದ್ಧದ ಭೀತಿ ಮತ್ತು ದೇಶೀಯ ಬ್ಯಾಂಕಿಂಗ್ ವಲಯದ ಬೆಳವಣಿಗೆಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಅಕ್ಷರಶಃ ಕುಸಿತ ಕಂಡಿದೆ.

ಬಿಎಸ್ಇ ಸೆನ್ಸೆಕ್ಸ್ ಭರ್ಜರಿ 2,496 ಅಂಕಗಳನ್ನು (ಶೇ. 3) ಕಳೆದುಕೊಂಡು 74,207 ಮಟ್ಟಕ್ಕೆ ಕುಸಿದರೆ, ನಿಫ್ಟಿ 775 ಅಂಕಗಳ ಇಳಿಕೆಯೊಂದಿಗೆ 23,002 ಮಟ್ಟಕ್ಕೆ ಬಂದು ನಿಂತಿದೆ.

ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸುಮಾರು 4,000 ಕಂಪನಿಗಳ ಪೈಕಿ 3,048 ಷೇರುಗಳು ಕೆಂಪು ಬಣ್ಣಕ್ಕೆ ತಿರುಗಿದ್ದು, ಕೇವಲ 864 ಷೇರುಗಳು ಮಾತ್ರ ಅಲ್ಪ ಲಾಭ ಕಂಡಿವೆ.

ಬ್ಯಾಂಕ್‌ನ ಛೇರ್ಮನ್ ಅತಾನು ಚಕ್ರಬರ್ತಿ ಅವರ ಹಠಾತ್ ರಾಜೀನಾಮೆಯಿಂದಾಗಿ ಎಚ್‌ಡಿಎಫ್‌ಸಿ ಷೇರು ಒಂದೇ ದಿನದಲ್ಲಿ ಶೇ. 8ರಷ್ಟು ಕುಸಿದು ಹೂಡಿಕೆದಾರರಿಗೆ ಭಾರಿ ನಷ್ಟ ಉಂಟುಮಾಡಿದೆ.

ಕುಸಿತಕ್ಕೆ ಪ್ರಮುಖ ಕಾರಣಗಳು:

ಇರಾನ್‌ನ ‘ಮಾಡು ಇಲ್ಲವೇ ಮಡಿ’ ಹೋರಾಟದ ಎಚ್ಚರಿಕೆ ಜಾಗತಿಕವಾಗಿ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಇದು ಹಣದುಬ್ಬರ ಏರಿಕೆಗೆ ಮತ್ತು ಆರ್ಥಿಕ ಕುಸಿತಕ್ಕೆ ದಾರಿ ಮಾಡಿಕೊಡುವ ಆತಂಕ ಮೂಡಿಸಿದೆ.

ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆಯು ಹಣದುಬ್ಬರದ ಕುರಿತು ನೀಡಿರುವ ಹೇಳಿಕೆ ಮಾರುಕಟ್ಟೆಯಲ್ಲಿ ನಡುಕ ಹುಟ್ಟಿಸಿದೆ.

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು ಮತ್ತು ವಿದೇಶಿ ಹೂಡಿಕೆದಾರರು (FII) ಷೇರುಗಳನ್ನು ಮಾರಾಟ ಮಾಡುತ್ತಿರುವುದು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !