March 28, 2026
Saturday, March 28, 2026
spot_img

ಉಪ್ಪಿನಂಗಡಿಯಲ್ಲಿ ಕಂಬಳ ಸಂಭ್ರಮಕ್ಕೆ ಅಡ್ಡಿಯಾದ ಬಿರುಗಾಳಿ, ಮಳೆ: ಬ್ಯಾನರ್, ಶಾಮಿಯಾನ ಚೆಲ್ಲಾಪಿಲ್ಲಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶನಿವಾರ ಸಾಯಂಕಾಲ ಬೀಸಿದ ಬಿರುಗಾಳಿ ಮಳೆಯಿಂದಾಗಿ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ.

ಇಲ್ಲಿ ಕಂಬಳ ಆಯೋಜನೆಯಾಗಿದ್ದು, ಅದಕ್ಕಾಗಿ ಅದ್ದೂರಿಯಾಗಿ ನಡೆಯುತ್ತಿದ್ದ ಸಿದ್ಧ್ದತೆಗಳಿಗೆ ಮಳೆ ಅಡ್ಡಿಯಾಯಿತು. ಪರಿಸರದಲ್ಲಿ ಅಳವಡಿಸಲಾದ ಬ್ಯಾನರ್‌ಗಳು ಧರೆಗುರುಳಿದ್ದು, ಪ್ರೇಕ್ಷಕರಿಗೆ ಹಾಕಲಾಗಿದ್ದ ಶಾಮೀಯಾನಗಳು ಕೂಡಾ ಚೆಲ್ಲಾಪಿಲ್ಲಿಯಾಗಿದೆ. ಕಂಬಳ ಪರಿಸರದಲ್ಲಿ ಅಳವಡಿಸಲಾದ ಅಂಗಡಿ ಮುಂಗಟ್ಟುಗಳು ಅತಂತ್ರ ಸ್ಥಿತಿಯಲ್ಲಿದ್ದು, ಬಳಿಕ ಮಂದಗತಿಯ ಮಳೆ ಸುರಿದು ಪರಿಸರವಿಡೀ ತಂಪಾಯಿತು. ತನ್ಮೂಲಕ ಬಿಸಿ ವಾತಾವರಣದಲ್ಲಿ ಬಳಲುತ್ತಿದ್ದ ಮಂದಿ ತಂಪು ವಾತಾವರಣದಲ್ಲಿ ಕಂಬಳವನ್ನು ವೀಕ್ಷಿಸಲು ಅವಕಾಶ ಒದಗಿದಂತಾಯಿತು. ಬಿರುಗಾಳಿ ಹೊಡೆತಕ್ಕೆ ಅಲ್ಲಲ್ಲಿ ಹಾನಿಯುಂಟಾಗಿರುವ ಬಗ್ಗೆ ಮಾಹಿತಿ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !