ಹೊಸದಿಗಂತ ವರದಿ, ತಿಪಟೂರು:
ಬೀದಿಯಲ್ಲಿ ಆಟವಾಡುತ್ತಿದ್ದ ಆರು ವರ್ಷದ ಮಗುವಿನ ಮೇಲೆ ಬೀದಿನಾಯಿಗಳ ಹಿಂಡು ಮಗುವಿನ ತಲೆ ಹಾಗೂ ಹೊಟ್ಟೆಯ ಭಾಗವನ್ನು ಕಚ್ಚಿ ಎಳೆದಾಡಿ ಕೊನೆಗೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ನಡೆದಿದೆ.
ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯ ಹಾಗೂ ಭಾಗ್ಯಮ್ಮ ಅವರ ಮಗಳು 6 ವರ್ಷದ ನವ್ಯ ಬೀದಿ ನಾಯಿಗಳ ಕೃತ್ಯಕ್ಕೆ ಬಲಿಯಾದ ಮಗು.
ಮಧ್ಯಾಹ್ನ ನಾಲ್ಕು ಗಂಟೆ ಸಮಯದಲ್ಲಿ ಅಯ್ಯನ ಬಾವಿ ಗ್ರಾಮದ ತಮ್ಮ ಮನೆ ಮುಂದೆ ಆಟವಾಡುತ್ತಿದ್ದ ನವ್ಯಾಳ ಮೇಲೆ ಬೀದಿ ನಾಯಿಗಳ ಹಿಂಡು ಏಕಾಎಕೀ ದಾಳಿ ನಡೆಸಿದ ನಾಯಿಗಳು ಮಗುವಿನ ತಲೆಯ ಚರ್ಮವನ್ನು ಸಂಪೂರ್ಣವಾಗಿ ಕಿತ್ತುಹಾಕಿದ್ದು ಹೊಟ್ಟೆಯ ಭಾಗವನ್ನು ಕಿತ್ತು ಕರುಳು ಆಚೆಬರುವಂತೆ ಮಾಡಿವೆ. ಮಗುವಿನ ಮುಖ ಹಾಗೂ ಕೈ ಕಾಲು ತೊಡೆಭಾಗವನ್ನು ಕಿತ್ತು ಹಾಕಿದೆ. ರಕ್ತದ ಮಡುವಿನಲ್ಲಿ ಕೀರಾಡುತ್ತಿದ್ದ ಮಗುವನ್ನು ಕಂಡ ಸಾರ್ವಜನಿಕರು ನಾಯಿಯ ಗುಂಪನ್ನು ಓಡಿಸಿ ಮಗುವನ್ನು ತಕ್ಷಣ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು. ಮಗು ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಖಾಸಗಿ ಆಂಬುಲೈನ್ಸ್ ಮೂಲಕ ಕರೆದೋಯ್ಯಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ವಿಷಯ ತಿಳಿದು ಮತ್ತಿಹಳ್ಳಿ ಗ್ರಾಪಂ ಪಿಡಿಒ ಶಿವರಾಜ್ ಹಾಸನ ಜಿಲ್ಲಾಸ್ವತ್ರೆಗೆ ಭೇಟಿ ನೀಡಿದ್ದಾರೆ.
ಕಣ್ಣ ಮುಂದೆ ಆಟವಾಡಿಕೊಂಡು ಇದ್ದ ಮಗು, ನಾಯಿಗಳ ಹಾವಳಿಯಿಂದ ಬಲಿಯಾಗಿದ್ದ ಪೋಷಕರ ದುಃಖ ಮುಗಿಲು ಮುಟ್ಟಿದೆ. ಈ ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮೃತಳ ತಂದೆ ಮಹಲಿಂಗಯ್ಯನಿಗೆ ಕಾಲು ಮುರಿದುಕೊಂಡಿದ್ದು ಕಿವಿ ಕೇಳುವುದಿಲ್ಲ ಹಾಗೂ ತಾಯಿ ಭಾಗ್ಯಮ್ಮಗೂ ಸಹ ಕಿವಿ ಕೇಳುವುದಿಲ್ಲ ಇವರಿಗೆ ಇಬ್ಬರು ಮಕ್ಕಳಿದ್ದು ಮೃತ ನವ್ಯ ಎರಡನೇ ಮಗಳಾಗಿದ್ದಳು. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.