ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನಲ್ಲಿ ನಾಲ್ಕು ದಿನಗಳ ಹಿಂದೆ ಒಂದೇ ದಿನದಲ್ಲಿ ಬೀದಿ ನಾಯಿಯೊಂದು ಎಂಟು ಮಕ್ಕಳ ಮೇಲೆ ದಾಳಿ ನಡೆಸಿತ್ತು. ನಾಯಿ ದಾಳಿಯಿಂದಾಗಿ ಗಾಯಗೊಂಡಿದ್ದ ನಾಲ್ಕು ವರ್ಷದ ಬಾಲಕಿ ಇಂದು ಮೃತಪಟ್ಟಿದ್ದಾಳೆ.
ರಾಯಚೂರು ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿ ಲಾವಣ್ಯ ಎಂಬ ಬಾಲಕಿ ಆಟ ಆಡುತ್ತಿದ್ದಳು, ಈ ವೇಳೆ ಬಾಲಕಿಯ ಕತ್ತಿನ ಹಿಂಭಾಗಕ್ಕೆ ನಾಯಿ ಕಚ್ಚಿತ್ತು. ಲಾವಣ್ಯ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಡಿಸ್ಚಾರ್ಜ್ ಆಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲಾವಣ್ಯ ಏಕಾಏಕಿ ಮೃತಪಟ್ಟಿದ್ದಾಳೆ. ನಾಯಿ ಕಡಿತಕ್ಕೆ ಒಳಗಾದ ಉಳಿದ ಮಕ್ಕಳ ಪೋಷಕರಿಗೆ ಇದರಿಂದ ಭೀತಿ ಉಂಟಾಗಿದೆ. ಮಕ್ಕಳನ್ನು ಕಚ್ಚಿದ ನಾಯಿಯನ್ನು ಗ್ರಾಮಸ್ಥರು ಹೊಡೆದು ಕೊಂದಿದಾರೆ ಎನ್ನಲಾಗಿದೆ.