CINE | ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದು ಒಟಿಟಿಗೆ ಕಾಲಿಟ್ಟ ಸ್ತ್ರೀ2, ಆದ್ರೆ ಒಂದು ಕಂಡೀಷನ್‌ ಇದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಸ್ತ್ರೀ2 ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿ ಇದೀಗ ಒಟಿಟಿಗೆ ಲಗ್ಗೆ ಇಟ್ಟಿದೆ.

ಶ್ರದ್ಧಾ ಕಪೂರ್, ರಾಜ್​ಕುಮಾರ್ ರಾವ್, ಪಂಕಜ್ ತ್ರಿಪಾಠಿ ಮೊದಲಾದವರು ನಟಿಸಿರೋ ‘ಸ್ತ್ರೀ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ವೀಕ್ಷಿಸಬಹುದು. ಆದರೆ, ಇದಕ್ಕೆ ನೀವು ಬಾಡಿಗೆ ಪಾವತಿ ಮಾಡಬೇಕು.

ಸ್ತ್ರೀ 2’ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ 349 ರೂಪಾಯಿಗೆ ಲಭ್ಯವಿದೆ. ಹಿಂದಿ ಭಾಷೆಯಲ್ಲಿ ಮಾತ್ರ ಸಿನಿಮಾನ ನೋಡಬಹುದು. ಚಂದಾದಾರರು ಇದನ್ನು ಉಚಿತವಾಗಿ ವೀಕ್ಷಿಸಬೇಕು ಎಂದರೆ ಮತ್ತಷ್ಟು ದಿನ ಕಾಯಬೇಕು. ಅಲ್ಲಿಯವರೆಗೆ ಬಾಡಿಗೆ ನೀಡಿಯೇ ಹಣ ಪಾವತಿ ಮಾಡಬೇಕು. ಕುತೂಹಲ ತಾಳೋಕೆ ಆಗೋದಿಲ್ಲ ಎಂದರೆ ಈಗಲೇ ಹಣ ಪಾವತಿಸಿ ಸಿನಿಮಾ ನೋಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here