Street Food | ಬೀದಿ ಬದಿ ಸಿಗುವ ಈ ಆಹಾರಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ!

ಹೆಚ್ಚುವರಿ ಎಣ್ಣೆ, ಮಸಾಲೆ, ಸ್ವಚ್ಛತೆಯ ಕೊರತೆ – ಇವುಗಳ ಕಾರಣದಿಂದ ಬೀದಿ ಬದಿ ಆಹಾರವನ್ನು ಆರೋಗ್ಯಕ್ಕೆ ಹಾನಿಕರ ಎಂದು ಹಲವರು ದೂರ ತಳ್ಳುತ್ತಾರೆ. ಆದರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯವೆಂದರೆ, ಎಲ್ಲ ಬೀದಿ ಆಹಾರವೂ ಕೆಟ್ಟದ್ದಲ್ಲ. ನೀವು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿದರೆ, ಬೀದಿಯಲ್ಲೂ ಪೋಷಕಾಂಶಗಳಿರುವ, ಕಡಿಮೆ ಎಣ್ಣೆಯುಳ್ಳ, ಆರೋಗ್ಯಕರ ತಿಂಡಿಗಳೂ ಸಿಗುತ್ತವೆ. ಪಾನಿಪುರಿ ಅಥವಾ ಬಜ್ಜಿ ಬದಲಿಗೆ ಇನ್ನು ಮುಂದೆ ಈ ತಿಂಡಿಗಳನ್ನು ಟ್ರೈ ಮಾಡಿ. ರುಚಿಗೂ ಕಮ್ಮಿ ಇಲ್ಲ, ಆರೋಗ್ಯನೂ ಹಾಳಾಗಲ್ಲ.

ಭೇಲ್ ಪುರಿ
ಅತ್ಯಂತ ಜನಪ್ರಿಯವಾದ ಬೀದಿ ತಿಂಡಿ. ಯಾವುದೇ ಎಣ್ಣೆಯಿಲ್ಲದ ಈ ಮಿಶ್ರಣದಲ್ಲಿ ಚುರುಮುರಿ, ಬೂಂದಿ, ಟೊಮೇಟೊ, ಈರುಳ್ಳಿ ಮತ್ತು ಲೈಟ್ ಮಸಾಲೆಗಳನ್ನು ಬಳಸಲಾಗುತ್ತದೆ. ಕಡಿಮೆ ಕ್ಯಾಲೊರಿಯೊಂದಿಗೆ ಜೀರ್ಣಶಕ್ತಿಗೂ ಉತ್ತಮ.

Bhel Puri Recipe (Mumbai Street Style)

ಚನಾ ಚಾಟ್
ಬೇಯಿಸಿದ ಕಡಲೆಕಾಯಿ, ಈರುಳ್ಳಿ, ಟೊಮೇಟೊ, ನಿಂಬೆ ರಸ ಇತ್ಯಾದಿಗಳ ಮಿಶ್ರಣದಿಂದ ತಯಾರಾಗಿ, ತಿನ್ನುವಾಗ ರುಚಿ ಮತ್ತು ಆರೋಗ್ಯ ಎರಡೂ ದೊರೆಯುತ್ತದೆ.

ಚನಾ ಚಾತ್ - ರಾಬಿನ್ ಏಜ್

ಸುಟ್ಟ ಜೋಳ
ಮಳೆಗಾಲದಲ್ಲಿ ಬೀದಿ ಬದಿಯಲ್ಲಿ ದೊರೆಯುವ ಸುಟ್ಟ ಜೋಳ ಅಥವಾ ಬೇಯಿಸಿದ ಜೋಳ, ಫೈಬರ್‌ನ ಭಂಡಾರ. ನಿಂಬೆ ರಸ, ಉಪ್ಪು ಸೇರಿಸಿದರೆ ಇನ್ನೂ ರುಚಿಕರ. ಜೀರ್ಣಕ್ಕೆ ಸಹಕಾರಿಯು ಹೌದು.

Health Benefits Of Corn,ಸುಟ್ಟ ಜೋಳ ತಿಂದ್ರೆ ಮೂಲವ್ಯಾಧಿ ಬರಲ್ವಾ? ಇಲ್ಲಿದೆ ಸಂಪೂರ್ಣ  ಮಾಹಿತಿ - amazing health benefits of corn in kannada - Vijay Karnataka

ಇಡ್ಲಿ
ಬಿಸಿ ಬಿಸಿ ಇಡ್ಲಿಗಳಲ್ಲಿ ಎಣ್ಣೆಯೇ ಇಲ್ಲ. ಉದ್ದಿನ ಬೇಳೆ ಮತ್ತು ಅಕ್ಕಿಯಿಂದ ತಯಾರಾದ ಈ ತಿಂಡಿ ಲೈಟ್ ಆಗಿದ್ದು, ಎಲ್ಲರಿಗೂ ಸರಿಹೊಂದುತ್ತದೆ. ಹಾಗೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಆಯ್ಕೆ.

Idli Recipe (Traditional South Indian)

ಏನನ್ನೇ ತಿಂದರೂ ಸ್ಥಳದ ಸ್ವಚ್ಛತೆ, ಆಹಾರ ತಯಾರಿಕೆಯ ವಿಧಾನ ಗಮನದಲ್ಲಿಟ್ಟುಕೊಳ್ಳುವುದು ಬಹುಮುಖ್ಯ. ರುಚಿಗಿಂತಲೂ ಮುಖ್ಯವಾಗುವುದು ಆರೋಗ್ಯ. ಸಣ್ಣ ಆಯ್ಕೆಗಳು ನಿಮ್ಮ ದೀರ್ಘಕಾಲಿಕ ಆರೋಗ್ಯದಲ್ಲಿ ಬದಲಾವಣೆಯನ್ನು ತರುವ ಸಾಧ್ಯತೆ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!