ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತೊಂದು ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಭಾರತ ಅಗ್ನಿ-5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದೆ.
ಒಂದೇ ಒಂದು ಕ್ಷಿಪಣಿ ಮೂಲಕ ಅನೇಕ ಗುರಿಗಳನ್ನು ಹೊಡೆಯುವ ತಾಕತ್ತು ಇದಕ್ಕೆ ಇದ್ದು, ಪಾಕಿಸ್ತಾನ ಹಾಗೂ ಚೀನಾದ ಅನೇಕ ಆಯಕಟ್ಟಿನ ಸ್ಥಳಗಳು ಈಗ ಭಾರತದ ಕೈಯಲ್ಲಿವೆ.
ಅಗ್ನಿ-5 ಕ್ಷಿಪಣಿ ಪರೀಕ್ಷೆಯೂ ಪಾಕಿಸ್ತಾನಕ್ಕೆ ಆತಂಕ ತಂದಿದ್ದು, ಅಲ್ಲಿನ ಮಿಸೈಲ್ ಥಿಂಕ್ ಟ್ಯಾಂಕ್ ಪಾಕ್ ಪ್ರಧಾನಿ ಹಾಗೂ ಸೇನಾ ಮುಖ್ಯಸ್ಥನಿಗೆ ಎಚ್ಚರಿಕೆ ನೀಡಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಭೇಟಿ ನೀಡುವುದಕ್ಕೆ ಒಂದು ವಾರಕ್ಕೂ ಮುನ್ನ ಈ ಪರೀಕ್ಷೆ ನಡೆದಿರುವುದು ಕುತೂಹಲ ಕೆರಳಿಸಿದೆ.
ಒಡಿಶಾದ ಚಾಂದಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಿಂದ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. ಆಗಸ್ಟ್ 20 ರಂದು ಈ ಪರೀಕ್ಷೆ ನಡೆದಿದ್ದು, ಈ ಉಡಾವಣೆಯು ಕ್ಷಿಪಣಿಯ ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ಮಾನದಂಡಗಳನ್ನು ಪೂರೈಸಿದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.
ಸಂಪೂರ್ಣವಾಗಿ ಆಯಕಟ್ಟಿನ ಪಡೆಗಳ ಕಮಾಂಡ್ ನೇತೃತ್ವದಲ್ಲಿ ಈ ಪರೀಕ್ಷೆ ನಡೆದಿದ್ದು, ನಿಖರ ಗುರಿಯನ್ನು ತಲುಪುವಲ್ಲಿ ಅಗ್ನಿ-5 ಕ್ಷಿಪಣಿ ಸಂಪೂರ್ಣ ಯಶಸ್ವಿಯಾಗಿದೆ. ಕಳೆದ ವರ್ಷ ಮಾರ್ಚ್ ಅಂದ್ರೇ ಮಾರ್ಚ್ 11, 2024ರಂದು ತಮಿಳುನಾಡಿನ ಕಲ್ಪಕಂನಲ್ಲಿ ಭಾರತ ಅಗ್ನಿ-5 ಕ್ಷಿಪಣಿಯನ್ನು ಟೆಸ್ಟ್ ಮಾಡಿತ್ತು. ಇದು ಭಾರತದ ಕ್ಷಿಪಣಿ ತಂತ್ರಜ್ಞಾನದ ನಿರಂತರ ಅಭಿವೃದ್ಧಿಗೆ ಸಾಕ್ಷಿಯಾಗಿದೆ.