March 24, 2026
Tuesday, March 24, 2026
spot_img

HEALTH | ಮಹಿಳೆಯರು ದಪ್ಪ ಆಗೋಕೆ ಒತ್ತಡವೇ ಕಾರಣ, ಈ ಲಕ್ಷಣಗಳಿದ್ರೆ ಸ್ಟ್ರೆಸ್‌ ಲೆವೆಲ್‌ ಜಾಸ್ತಿ ಇದೆ ಅಂತರ್ಥ

ಮನೆಯ ಕೆಲಸ, ಆಫೀಸ್‌ ಕೆಲಸ, ಓದು, ಮಕ್ಕಳನ್ನು ನೋಡುವುದು ಎಲ್ಲವನ್ನು ಹೆಣ್ಣುಮಕ್ಕಳು ಏನೂ ಅಲ್ಲ ಅನ್ನೋ ಹಾಗೆ ನಿಭಾಯಿಸಿಬಿಡ್ತಾರೆ. ಆದರೆ ಈ ಮಧ್ಯೆ ತಮ್ಮ ದೇಹಕ್ಕೆ ಎಷ್ಟೆಲ್ಲಾ ಒತ್ತಡ ಆಗ್ತಿದೆ, ಮಾನಸಿಕವಾಗಿ ಕುಗ್ಗುತ್ತಿದ್ದೀವಿ ಅನ್ನೋದನ್ನು ಮರೆತೇಬಿಡ್ತಾರೆ. ಮಹಿಳೆಯರಿಗೆ ಸ್ಟ್ರೆಸ್‌ ಹಾರ್ಮೋನ್‌ ಅಂದರೆ ಕಾರ್ಟಿಸಾಲ್‌ ಜಾಸ್ತಿ ಆಗಿದ್ರೆ ಈ ಎಲ್ಲ ಲಕ್ಷಣಗಳು ಕಾಣುತ್ತವೆ..

ವೀಕ್‌ ಆದ ಬೋನ್ಸ್‌, ಆಗಾಗ ನೋವು
ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದೇ ಇರುವುದು
ಹೈಬಿಪಿ ಅಥವಾ ಶುಗರ್‌ ಸಮಸ್ಯೆ
ಎಲ್ಲದಕ್ಕೂ ಕಿರಿಕಿರಿ ಅನುಭವಿಸುವುದು
ತೂಕ ಏರಿಕೆ, ಮುಖ್ಯವಾಗಿ ಹೊಟ್ಟೆಯ ಸುತ್ತಲಿನ ಬೊಜ್ಜು
ನಿದ್ದೆ ಮಾಡಿ ಎದ್ರೂ ಸುಸ್ತು, ಬೇಸರ
ಯಾವಾಗಲೂ ಹೊರಗಿನ ಆಹಾರ, ಜಂಕ್‌ಫುಡ್‌ ತಿನ್ನುವ ಆಸೆ
ಆಗಾಗ ತಲೆನೋವು
ಮುಖ ಊದಿಕೊಂಡಂತೆ ಇರುವುದು, ಬೇಗ ವಯಸ್ಸಾದಂತೆ ಕಾಣುವುದು
ಮುಖದಲ್ಲಿ ಕಲೆ, ಚರ್ಮ ಕಳೆ ಇಲ್ಲದಿರುವುದು
ಲೈಂಗಿಕ ಆಸಕ್ತಿ ಇಲ್ಲದಿರುವುದು
ಬೇಗ ಟ್ರಿಗರ್‌ ಆಗುವುದು
ಕಾಫಿ, ಸಕ್ಕರೆ ಅಂಶಗಳಿಗೆ ಅಡಿಕ್ಟ್‌ ಆಗುವುದು
ಒಂದು ವಿಷಯಕ್ಕೆ ಗಮನ ಕೊಡಲು ಕಷ್ಟವಾಗುವುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !