ಇನ್‌ಸ್ಟಾಗ್ರಾಮ್‌ನಲ್ಲಿ ಕಠಿಣ ರೂಲ್ಸ್: ಇನ್ಮುಂದೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಲೈವ್‌ ಸ್ಟ್ರೀಮ್‌ ಮಾಡಲು ಸಾಧ್ಯವಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸಾಮಾಜಿಕ ಜಾಲತಾಣ ಮೆಟಾ ಹದಿಹರೆಯದವರ ಸುರಕ್ಷತೆಯನ್ನು ಗಮನದಲ್ಲಿಟ್ಟು ತನ್ನ ನಿಯಮದಲ್ಲಿ ಕೆಲವೊಂದು ಬದಲಾವಣೆ ತಂದಿದೆ.

ಹದಿಹರೆಯದ ಸುರಕ್ಷತಾ ವೈಶಿಷ್ಟ್ಯಗಳನ್ನು ಇನ್‌ಸ್ಟಾಗ್ರಾಮ್‌ ಜತೆಗೆ ಫೇಸ್‌ಬುಕ್‌ ಮತ್ತು ಮೆಸೆಂಜರ್‌ಗೂ ವಿಸ್ತರಿಸಿದೆ. ಇನ್‌ಸ್ಟಾಗ್ರಾಮ್‌ ಲೈವ್ ಮೇಲಿನ ನಿರ್ಬಂಧವು ಪ್ರಮುಖ ಬದಲಾವಣೆಗಳಲ್ಲಿ ಒಂದು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರು ಪೋಷಕರ ಅನುಮತಿಯಿಲ್ಲದೆ ಇನ್‌ಸ್ಟಾಗ್ರಾಮ್‌ ಲೈವ್ ಬಳಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ನಗ್ನತೆಯನ್ನು ಒಳಗೊಂಡಿರುವ ಚಿತ್ರಗಳನ್ನು ಮಸುಕಾಗಿಸುವ ವೈಶಿಷ್ಟ್ಯಕ್ಕೂ ಈಗ ಪೋಷಕರ ಅನುಮೋದನೆ ಬೇಕಿದೆ.

ಇನ್ನು18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಫೇಸ್‌ಬುಕ್‌ ಮತ್ತು ಮೆಸೆಂಜರ್‌ಗೆ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಈ ಹದಿಹರೆಯದ ಖಾತೆಗಳು ಸ್ವಯಂಚಾಲಿತವಾಗಿ 18 ವರ್ಷದೊಳಗಿನ ಬಳಕೆದಾರರಿಗೆ ಕಠಿಣ ಸುರಕ್ಷತಾ ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಪೋಷಕರು ದೈನಂದಿನ ಸಮಯ ಮಿತಿಗಳನ್ನು ಹೊಂದಿಸಬಹುದು. ಕೆಲವು ಗಂಟೆಗಳಲ್ಲಿ ಬಳಕೆಯನ್ನು ನಿರ್ಬಂಧಿಸಬಹುದು ಮತ್ತು ಮಕ್ಕಳು ಯಾರಿಗೆ ಸಂದೇಶ ಕಳುಹಿಸುತ್ತಿದೆ ಎಂಬುದನ್ನು ವೀಕ್ಷಿಸಬಹುದು.

ಹೊಸ ಅಪ್‌ಡೇಟ್‌ನಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರು ಈ ಡೀಫಾಲ್ಟ್ ಸೆಟ್ಟಿಂಗ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಪೋಷಕರ ಒಪ್ಪಿಗೆಯ ಅಗತ್ಯವಿದೆ. ಈ ನವೀಕರಿಸಿದ ವೈಶಿಷ್ಟ್ಯಗಳನ್ನು ಮೊದಲು ಅಮೆರಿಕ, ಇಂಗ್ಲೆಂಡ್‌, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಪರಿಚಯಿಸಲಾಗುತ್ತದೆ. ಅದಾದ ಬಳಿಕ ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಬಳಕೆಗೆ ಬರಲಿದೆ.

ಹದಿಹರೆಯದ ಬಳಕೆದಾರರನ್ನು ರಕ್ಷಿಸಲು ಸರ್ಕಾರಗಳು ಟೆಕ್ ಕಂಪನಿಗಳ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಜಾರಿಗೆ ಬರುತ್ತಿದೆ.

ಇಂಗ್ಲೆಂಡ್‌ನಲ್ಲಿ ಆನ್‌ಲೈನ್‌ ಸುರಕ್ಷತಾ ಕಾಯ್ದೆ ಮಾರ್ಚ್‌ನಲ್ಲಿ ಜಾರಿಗೆ ಬಂದಿದ್ದು, ಇದು ಮಕ್ಕಳ ಮೇಲಿನ ದೌರ್ಜನ್ಯ, ಭಯೋತ್ಪಾದನೆ ಮತ್ತು ಆನ್‌ಲೈನ್‌ ವಂಚನೆಯಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸುತ್ತದೆ. ಆತ್ಮಹತ್ಯೆಯಂತಹ ಅಪಾಯಕಾರಿ ಚಟುವಟಿಕೆಗಳಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ರಕ್ಷಣೆ ನೀಡಲು ಹೆಚ್ಚುವರಿ ಕ್ರಮ ಅಗತ್ಯ ಎನ್ನುವುದು ತಜ್ಞರ ಅಭಿಮತ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!