ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುರುವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಭೂಮಿ ಕಂಪಿಸಿದಾಗ ಜನ ಭಯಭೀತರಾಗಿದ್ದು, ಮನೆ ಹಾಗೂ ಕಚೇರಿಗಳಿಂದ ಓಡಿ ಹೊರಕ್ಕೆ ಬಂದಿದ್ದಾರೆ.
ಆರಂಭಿಕ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಹರಿಯಾಣದ ಜಜ್ಜರ್‌ನಿಂದ ಈಶಾನ್ಯಕ್ಕೆ 4 ಕಿ.ಮೀ ದೂರದಲ್ಲಿದ್ದು, 14 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ವೇಳೆ ಜನರು ಭಯಭೀತರಾಗಿ ಮನೆ-ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ.
ದೆಹಲಿ, ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಗಳಲ್ಲಿ ಭೂಕಂಪದ ಅನುಭವವಾಗಿದೆ. ಹರಿಯಾಣದ ರೋಹ್ಟಕ್‌ನಲ್ಲೂ ಪರಿಣಾಮ ಎದುರಿಸಲಾಗಿದ್ದು, ರಸ್ತೆಗಳಲ್ಲಿ ವಾಹನಗಳು ಅಲುಗಾಡಿದ ಅನುಭವವಾಗಿದೆ.
ಹರಿಯಾಣದ ಜಿಂದ್ ಮತ್ತು ಬಹದ್ದೂರ್‌ಗಢ ಹೊರತುಪಡಿಸಿ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪ್ರದೇಶಗಳು ಸಹ 10 ಸೆಕೆಂಡುಗಳ ಕಾಲ ಕಂಪನವನ್ನು ಅನುಭವಿಸಿದವು.
ಕಳೆದ ಆರು ತಿಂಗಳಲ್ಲಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಇದು ಮೂರನೇ ಭೂಕಂಪವಾಗಿದೆ. ಇದಕ್ಕೂ ಮೊದಲು, ಏಪ್ರಿಲ್ 19 ಮತ್ತು ಫೆಬ್ರವರಿ 17 ರಂದು ಸಹ ಭೂಕಂಪಗಳು ಸಂಭವಿಸಿದ್ದವು.