ನೇಪಾಳದಲ್ಲಿ ಪ್ರಬಲ ಭೂಕಂಪ: ಪರಿಹಾರ ಸಾಮಗ್ರಿ ಕಳುಹಿಸಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭಾರತ ತುರ್ತು ಪರಿಹಾರ ಸಾಮಾಗ್ರಿಗಳನ್ನು ಹಸ್ತಾಂತರಿಸಿದೆ.

ಭೂಕಂಪದಲ್ಲಿ 157ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ, ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇಪಾಳಕ್ಕೆ ಸಾಂತ್ವನ ಹೇಳಿ, ನೇಪಾಳದ ಜೊತೆ ಭಾರತ ಇದೆ ಎಂದು ಭರವಸೆ ನೀಡಿದ್ದರು.

ಅಂತೆಯೇ ಟಾರ್ಪಲ್, ಅಗತ್ಯ ಔಷಧಗಳು, ಬೆಡ್‌ಶೀಟ್, ಟೆಂಟ್, ಆಹಾರ ಹಾಗೂ ವೈದ್ಯಕೀಯ ಉಪಕರಣಗಳಿರುವ ಭಾರತೀಯ ವಾಯುಪಡೆಯ ವಿಶೇಷ ಸಿ-130 ವಿಮಾನ ನೇಪಾಳಕ್ಕೆ ಆಗಮಿಸಿದೆ.

ಒಟ್ಟಾರೆ 10 ಕೋಟಿ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಭಾರತ ನೇಪಾಳಕ್ಕೆ ಮಾನವೀಯತೆಯ ನೆರವು ನೀಡಿದೆ. ತುರ್ತು ಪರಿಹಾರ ಸಾಮಾಗ್ರಿಗಳು ಮೊದಲ ರವಾನೆಯು ನೇಪಾಲ್‌ಗುಂಜ್‌ಗೆ ತಲುಪಿದೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಪೋರ್ಟಬಲ್ ವೆಂಟಿಲೇಟರ್, ಚಾಪೆ, ವೈದ್ಯಕೀಯ ಉಪಕರಣಗಳು ವಿಮಾನದಲ್ಲಿವೆ ಮುಂದಿನ ದಿನಗಳಲ್ಲಿ ಭಾರತದಿಂದ ಮತ್ತಷ್ಟು ಪರಿಹಾರ ಸಾಮಾಗ್ರಿಗಳನ್ನು ಕಳುಹಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಮಿಷನ್ ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!