ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ, ಪಂಜಾಬ್ ಮತ್ತು ಇಸ್ಲಾಮಾಬಾದ್ ಸೇರಿದಂತೆ ಕೆಲವು ಭಾಗಗಳಲ್ಲಿಭೂಕಂಪ ಸಂಭವಿಸಿದ್ದು, 5.4 ತೀವ್ರತೆ ದಾಖಲಾಗಿದೆ ಎಂದು ಪಾಕ್ ಮಾಧ್ಯಮ ಮಾಡಿದೆ.
ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಸೆಂಟರ್ (NSMC) ಪ್ರಕಾರ, ಭೂಕಂಪವು ಬೆಳಿಗ್ಗೆ 2:04 PSTಕ್ಕೆ 102 ಕಿ.ಮೀ ಆಳದಲ್ಲಿ ಸಂಭವಿಸಿದೆ, ಇದರ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂಕುಷ್ ಪರ್ವತ ಪ್ರದೇಶದಲ್ಲಿದೆ.
ಅಫ್ಘಾನಿಸ್ತಾನ ಮತ್ತು ತಜಿಕಿಸ್ತಾನದ ವಿವಿಧ ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ ಎಂದು NSMC ತಿಳಿಸಿದೆ. ಪೇಶಾವರ್, ಸ್ವಾತ್, ಮಲಕಂಡ್, ನೌಶೇರಾ, ಚಾರ್ಸದ್ದಾ, ಕರಕ್, ದಿರ್, ಮರ್ದಾನ್, ಮೊಹ್ಮಂಡ್, ಶಾಂಗ್ಲಾ, ಹಂಗು, ಸ್ವಾಬಿ, ಹರಿಪುರ್ ಮತ್ತು ಅಬ್ಬೋಟಾಬಾದ್ ಸೇರಿದಂತೆ ಖೈಬರ್ ಪಖ್ತುಂಖ್ವಾದ ಹಲವಾರು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.