ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ರಷ್ಯಾದ ಪೂರ್ವ ಕರಾವಳಿಯಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ತುರ್ತು ಸಚಿವಾಲಯದ ಪ್ರಕಾರ, ಭೂಕಂಪವು ರಷ್ಯಾದ ಪೆಸಿಫಿಕ್ ಕರಾವಳಿಯ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಕಾದಿಂದ 44 ಕಿಮೀ ದಕ್ಷಿಣಕ್ಕೆ ಅಪ್ಪಳಿಸಿದೆ.
ಭೂಕಂಪವು 100 ಕಿಮೀ (27 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಆದರೆ ರಷ್ಯಾದ ತುರ್ತು ಸಚಿವಾಲಯವ ತಿಳಿಸಿದೆ. ಮಾಸ್ಕೋದಿಂದ ಪೂರ್ವಕ್ಕೆ 6,800 ಕಿಮೀ ದೂರದಲ್ಲಿರುವ ಕಮ್ಚಾಟ್ಕಾ ಪೆನಿನ್ಸುಲಾದಿಂದ ಮಾಧ್ಯಮಗಳು ಪೋಸ್ಟ್ ಮಾಡಿದ ದೃಶ್ಯಾವಳಿಗಳು ಭೂಕಂಪದಲ್ಲಿ ಬಿರುಕು ಬಿಟ್ಟಿರುವ ಸೂಪರ್ ಮಾರ್ಕೆಟ್ ಮತ್ತು ಕುಸಿದ ಕಟ್ಟಡಗಳನ್ನು ತೋರಿಸಿವೆ. ಆದರೂ ತಕ್ಷಣದ ಜೀವಹಾನಿ ಅಥವಾ ವಿನಾಶ ಸಂಭವಿಸಿಲ್ಲ ಎಂದು ಹೇಳಿದೆ.
ಭದ್ರತಾ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆ ತಂಡಗಳು ಕಟ್ಟಡಗಳನ್ನು ಪರಿಶೀಲಿಸುತ್ತಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೇ ಪ್ರಾಣಹಾನಿ ಅಥವಾ ಹಾನಿ ಸಂಭವಿಸಿಲ್ಲ. ಭೂಕಂಪದ ತೀವ್ರತೆ 6.9 ರಷ್ಟಿತ್ತು ಎಂದು ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಜಿಯೋಫಿಸಿಕಲ್ ಸರ್ವೆ ಕಮ್ಚಟ್ಕಾ ಶಾಖೆ ತಿಳಿಸಿದೆ.
ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಆರಂಭದಲ್ಲಿ ಭೂಕಂಪವನ್ನು 6.6 ರ ತೀವ್ರತೆಯಲ್ಲಿ ಇರಿಸಿದೆ. ಭೂಕಂಪದ ನಂತರ ಯಾವುದೇ ಸುನಾಮಿ ಎಚ್ಚರಿಕೆಗಳಿಲ್ಲ ಎಂದು ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆ ಹೇಳಿದೆ.