ಕೇರಳ-ಲಕ್ಷದ್ವೀಪ ಕರಾವಳಿಯಲ್ಲಿ ಬಲವಾದ ಗಾಳಿ: ಮೀನುಗಾರಿಕೆಗೆ ತೆರಳದಂತೆ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿ ಸಮುದ್ರ ತೀರದಲ್ಲಿ ಗಾಳಿಯ ಪ್ರಯಾಣ ಅಧಿಕವಾಗಿದ್ದು, ಈ ಹಿನ್ನೆಲೆ ಕೇರಳ-ಲಕ್ಷದ್ವೀಪ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಡಿಸೆಂಬರ್ 17 ಮತ್ತು 18 ರಂದು ಕೇರಳ-ಲಕ್ಷದ್ವೀಪ ಕರಾವಳಿ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದ ಪಕ್ಕದಲ್ಲಿ 40-45 ಕಿಮೀ ವೇಗದಲ್ಲಿ ಬಲವಾದ ಗಾಳಿ ಮತ್ತು ಕೆಟ್ಟ ಹವಾಮಾನದ ಸಾಧ್ಯತೆಯಿದೆ. ಹೀಗಾಗಿ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದೆ.

ಡಿಸೆಂಬರ್ 17-18 ರಂದು ಶ್ರೀಲಂಕಾ ಕರಾವಳಿಯುದ್ದಕ್ಕೂ ನೈಋತ್ಯ ಬಂಗಾಳ ಕೊಲ್ಲಿ, ತಮಿಳುನಾಡು ಕರಾವಳಿ, ಮನ್ನಾರ್ ಕೊಲ್ಲಿ ಮತ್ತು ಕನ್ಯಾಕುಮಾರಿ ಕರಾವಳಿಯಲ್ಲಿ ಕೆಟ್ಟ ಹವಾಮಾನ ಮತ್ತು ಪ್ರಬಲ ಗಾಳಿ ಬೀಸುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಈ ದಿನಾಂಕಗಳಲ್ಲಿ ಮೀನುಗಾರಿಕೆ ನಡೆಸಬಾರದು ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

ಆದರೆ ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆಗೆ ಯಾವುದೇ ಅಡ್ಡಿ ಇಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!