ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ರಚನಾತ್ಮಕ ಆರ್ಥಿಕ ಸುಧಾರಣೆ ಮತ್ತು ನೀತಿಗಳಿಂದಾಗಿ ಭಾರತೀಯ ಆರ್ಥಿಕತೆ ಬಲಗೊಳ್ಳುತ್ತಿದ್ದು, ಅಗ್ರ ನಾಲ್ಕು ಬೃಹತ್ ಆರ್ಥಿಕತೆಯ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ ಎಂದು ಬಿಜೆಪಿ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಝಾಫರ್ ಇಸ್ಲಾಮ್, ವಿಶ್ವಬ್ಯಾಂಕ್ ವರದಿ ಅನುಸಾರ ಆದಾಯ ಸಮಾನತೆಯಲ್ಲಿ ಭಾರತ ಜಾಗತಿಕವಾಗಿ ನಾಲ್ಕನೇ ಸ್ಥಾನಕ್ಕೆ ಏರಿದ್ದು, ಸುಮಾರು 27 ಕೋಟಿ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ ಎಂದರು.
2024 – 25ರ ಹಣಕಾಸು ವರ್ಷದಲ್ಲಿ ದೇಶದ ರಫ್ತು ಮೌಲ್ಯ 824 ಶತಕೋಟಿ ಡಾಲರ್ ಗೆ ಏರಿಕೆಯಾಗಿದ್ದು, ಐತಿಹಾಸಿಕ ದಾಖಲೆ ಬರೆಯಲಾಗಿದೆ. ವಿದೇಶಿ ಮೀಸಲು ನಿಧಿ ಮೌಲ್ಯ ಕೂಡ ಗಣನೀಯ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.