ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಸಣ್ಣ-ಲಿಫ್ಟ್ (SSLV) ಉಡಾವಣಾ ವಾಹನವು ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿದೆ. ವಾಹನವು ಭೂ ವೀಕ್ಷಣಾ ಉಪಗ್ರಹ – EOS-02 – ಮತ್ತು AzaadiSAT ಅನ್ನು ಒಯ್ಯುತ್ತಿದೆ. ಅಲ್ಲದೇ ಇದು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 75 ವಿವಿಧ ಪೇಲೋಡ್‌ಗಳನ್ನು ಒಯ್ಯುತ್ತಿದೆ.
ಉಪಗ್ರಹವನ್ನು ಹೊತ್ತ ಉಡಾವಣಾ ವಾಹನವು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈಗಾಗಲೇ ಉಡಾವಣೆಯಾಗಿದ್ದು ಉಡಾವಣೆಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ ಮತ್ತು ಮೊದಲ ಹಂತವು ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. ಇದೀಗ ಎರಡನೇ ಹಂತವೂ ಇಗ್ನೈಟ್ ಆಗಿದೆ ಎಂದು ಮೂಲಗಳು ವರದಿ ಮಾಡಿವೆ.
SSLV ವಾಹನವು 10 ರಿಂದ 500 ಕೆಜಿ ತೂಕದ ಮಿನಿ, ಮೈಕ್ರೋ ಮತ್ತು ನ್ಯಾನೊ ಉಪಗ್ರಹಗಳನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ.