March 31, 2026
Tuesday, March 31, 2026
spot_img

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಕಾವೇರಿ ನದಿಯಲ್ಲಿ ಮುಳಗಿ ಸಾವು

ಹೊಸದಿಗಂತ ವರದಿ, ಶ್ರೀರಂಗಪಟ್ಟಣ :

ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಆಗಮಿಸಿದ್ದ ವಿದ್ಯಾರ್ಥಿಯೊಬ್ಬ ಕಾವೇರಿ ನದಿಯಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ತಾಲೂಕು ಮಹದೇವಪುರ ಗ್ರಾಮದ ಬಳಿಯ ಕಾವೇರಿ ಬೋರೆ ದೇವಸ್ಥಾನದ ಬಳಿ ನಡೆದಿದೆ.

ಬೆಂಗಳೂರು ನಿವಾಸಿ ಚೋಳ ರಾಜ್ ಅವರ ಮಗ ಮನುಯಾದವ್ (21) ಮೃತ ವಿದ್ಯಾರ್ಥಿ. ಈತ ಬೆಂಗಳೂರಿನ ಗಿರಿನಗರದ ಕೃಷ್ಣ ಕಾಲೇಜಿನಲ್ಲಿ ಕೊನೆ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಮೃತ ಮನುಯಾದವ್ ತನ್ನ 6 ಮಂದಿ ಸ್ನೇಹಿತರೊಂದಿಗೆ ಇನೋವ ಕಾರಿನಲ್ಲಿ ಆಗಮಿಸಿ ಮಹದೇವಪುರ ಬಳಿಯ ಬೋರೆ ರಾಮಸ್ವಾಮಿ ನಾಲೆಯ ಚೆಕ್ ಡ್ಯಾಂನಲ್ಲಿ ಈಜಲು ತೆರಳಿದ್ದ ವೇಳೆ ನೀರಲ್ಲಿ ಮೃತಪಟ್ಟಿದ್ದಾನೆ. ಅರಕೆರೆ ಪೊಲೀಸರು ಸ್ಥಳಕ್ಕಾಗಮಿಸಿ, ಅಗ್ನಿ ಶಾಮಕ ದಳ ಸಿಬ್ಬಂದಿ ಮೃತ ದೇಹವನ್ನು ನೀರಿ ನಿಂದ ಹೊರ ತೆಗೆದು, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !