August 15, 2026
Saturday, August 15, 2026
spot_img

‘ಗಜೇಂದ್ರನ’ ಒಂಟಿತನಕ್ಕೆ ಸಿಕ್ಕಿತು ಮುಕ್ತಿ: 63 ವರ್ಷದ ದಸರಾ ಆನೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂಟಿತನದಲ್ಲಿ ಕಳೆಯುತ್ತಿದ್ದ 63 ವರ್ಷದ ಗಜೇಂದ್ರ ಆನೆಗೆ ಇಂದಿನಿಂದ ಹೊಸ ಜೀವನ ಆರಂಭವಾಗಿದ್ದು, ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಗಜೇಂದ್ರ ಚಾಮರಾಜನಗರ ಬೂದಿಪಡಗ ಶಿಬಿರದಲ್ಲಿ ಇತ್ತೀಚೆಗೆ ಒಂಟಿಯಾಗಿ ಹೋಗಿದ್ದನು. ಈತನ ಏಕಾಂಗಿತನ ಕಂಡು ಸ್ಥಳೀಯರು ಮನನೊಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಗಜೇಂದ್ರನ ಒಂಟಿತನಕ್ಕೆ ಮುಕ್ತಿ ಕೊಡುವಂತೆ ಅಭಿಯಾನಗಳು ನಡೆದಿದ್ದವು. ಅರಣ್ಯ ಇಲಾಖೆಗೂ ಮನವಿ ಮಾಡಲಾಗಿತ್ತು.

ಅಂತಿಮವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಆದೇಶದಂತೆ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ಗಜೇಂದ್ರ ಆನೆಯ ಒಂಟಿತನಕ್ಕೆ ಮುಕ್ತಿ ಕೊಟ್ಟ ಅರಣ್ಯ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರು ಧನ್ಯವಾದ ಸಲ್ಲಿಸಿದ್ದು, ಗಣೇಂದ್ರನಿಗೆ ಪೂಜೆ ಸಲ್ಲಿಸಿ ಖುಷಿಯಿಂದ ಬೀಳ್ಕೊಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !