ಹೊಸದಿಗಂತ ವರದಿ ಚಿಕ್ಕಮಗಳೂರು:
ಕಾತಾಲೂಕಿನ ಕಾಮೇನಹಳ್ಳಿ ಫಾಲ್ಸ್ ನಲ್ಲಿ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದೆ.
ಚಿಕ್ಕಮಗಳೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಚೇತನ್ (18) ಮೃತ ವಿದ್ಯಾರ್ಥಿ.
ತಗತಿಗೆ ರಜೆ ಇದ್ದ ಕಾರಣ ಸ್ನೇಹಿತರ ಜೊತೆ ಫಾಲ್ಸ್ ಗೆ ತೆರಳಿದ್ದ. ಕಲ್ಲು ಬಂಡೆಯ ಮೇಲಿನಿಂದ ನೀರಿಗೆ ಹಾರಿದ ವೇಳೆ ಬಂಡೆಗೆ ತಲೆ ಬಡಿದು ಸಾವನ್ನಪ್ಪಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿ ಫಾಲ್ಸ್ ನಿಂದ ಚೇತನ್ ಮೃತ ದೇಹ ಹೊರತೆಗೆದಿದ್ದು, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.