ಹೊಸದಿಗಂತ ಡಿಜಿಟಲ್ ಡೆಸ್ಕ್:
20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಒಡಿಶಾ ರಾಜ್ಯದ ಭುವನೇಶ್ವರದ ಗೋಪಾಲ್‌ಪುರ ಬೀಚ್‌ನಲ್ಲಿ ಯುವಕರು ವಿದ್ಯಾರ್ಥಿನಿಯ ಸ್ನೇಹಿತನ ಮುಂದೆಯೇ ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ನಡೆದಿದೆ.
ಗೋಪಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಂಥನಿವಾಸ್‌ನ ಹಿಂದಿನ ನಿರ್ಜನ ಪ್ರದೇಶದಲ್ಲಿ ಯುವಕರು ಅಪರಾಧ ಎಸಗಿದ್ದಾರೆ. ಗಂಜಾಂ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಬಾಲಕಿಯ ಮೇಲೆ ಸರದಿಯಂತೆ ಎರಡು ಗಂಟೆಗಳಿಗೂ ಹೆಚ್ಚು ಸಮಯ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಧೈರ್ಯ ತೋರಿಸಿದ ಅತ್ಯಾಚಾರ ಸಂತ್ರಸ್ತೆ ರಾತ್ರಿ 11 ಗಂಟೆಗೆ ದೂರು ನೀಡಲು ಗೋಪಾಲಪುರ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಎಂಟು ಆರೋಪಿಗಳನ್ನು ಬಂಧಿಸಿದರು, ಎಲ್ಲಾ ಶಂಕಿತ ಆರೋಪಿಗಳು 19 ರಿಂದ 23 ವರ್ಷ ವಯಸ್ಸಿನವರಾಗಿದ್ದು, ಹಿಂಜಿಲಿಗೆ ಸೇರಿದವರಾಗಿದ್ದಾರೆ.
ಸಂತ್ರಸ್ತೆ ತನ್ನ ಸಹಪಾಠಿಯೊಂದಿಗೆ ಸಂಜೆ 6.30 ರ ಸುಮಾರಿಗೆ ಬೀಚ್ ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆರೋಪಿಗಳು ಕುಕೃತ್ಯ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ದೂರದಲ್ಲಿ ಕುಳಿತಿದ್ದ ಯುವಕರನ್ನು ಗಮನಿಸಿದರು. ಕತ್ತಲಾದ ನಂತರ, ಯುವಕರು ಹುಡುಗಿಯ ಸ್ನೇಹಿತನ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿ ನಂತರ ಅವರಲ್ಲಿ ಮೂವರು ಹುಡುಗಿಯನ್ನು ಎಳೆದೊಯ್ದು ಅತ್ಯಾಚಾರವೆಸಗಲು ಆರಂಭಿಸಿದರು.
ಸಂತ್ರಸ್ತೆ ಎಷ್ಟೇ ಕೂಗಿಕೊಂಡರೂ, ಬೇಡಿಕೊಂಡರೂ ಬಿಡಲಿಲ್ಲ. ಅಪರಾಧ ಎಸಗಿ ಸ್ಥಳದಿಂದ ಪರಾರಿಯಾದರು, ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿ, ಏಳು ಮಂದಿ ಶಂಕಿತರನ್ನು ಬಂಧಿಸಿದರು. ನಂತರ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಯಿತು. ಹೆಚ್ಚಿನ ಆರೋಪಿಗಳು ಶಾಲೆ ಮತ್ತು ಕಾಲೇಜು ಬಿಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.