ಹೊಸದಿಗಂತ ವರದಿ, ಹಾವೇರಿ:
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಬಂದ ಆ್ಯಪ್ ನಂಬಿ ಕರೆ ಮಾಡಿದ್ದಕ್ಕೆ ಜೀವಭಯ ಸೃಷ್ಟಿಸಿ, ಮೂಢ ನಂಬಿಕೆಗಳ ಮೂಲಕ ಫಾರ್ಮಸಿಸ್ಟ್ ವಿದ್ಯಾರ್ಥಿನಿಯನ್ನು ಬೆದರಿಸಿ ೧೫ ಲಕ್ಷರೂ ಮೌಲ್ಯದ ೧೬೫ ಗ್ರಾಂ ಚಿನ್ನ ಪಡೆದು ಮೋಸಗೊಳಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಈ ವಂಚನೆಯ ಬಗ್ಗೆ ಹಾವೇರಿ ಯ ಸಿಇಎನ್ ಪೊಲೀಸ್ ಠಾಣೆ ಯಲ್ಲಿ ಜೂ.೨೮ರಂದು ದೂರು ದಾಖಲಾಗಿದೆ.
ನಗರದ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿ ಹೂವನಗೌಡ ದ್ಯಾವಣ್ಣನವರ ಇನ್ಸ್ಟಾಗ್ರಾಮ್ ನಲ್ಲಿ ಗಣೇಶ ಶಾಸ್ತ್ರಿ, ಚಂದನ ಹಾಗೂ ಗುರು ಎನ್ನುವವರು ಸಂಪರ್ಕಿಸಿ ಮಾ.23 ರಿಂದ ಜೂ.9ವರೆಗೆ ಬೇರೆ ರೀತಿಯ ಕುಂಕುಮ, ಬಂಡಾರ, ತಾಯತ, ಕುಬೇರ ಯಂತ್ರಗಳನ್ನು ಕಳಿಸಿ ಪೂಜೆ ಮಾಡಿದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇವೆ , ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ನಂಬಿಸಿ ಚಿನ್ನವನ್ನು ಪಡೆದು ಮೋಸಗೊಳಿಸಿದ್ದಾರೆ.
ವಂಚಕ ಜ್ಯೋತಿಷಿಗಳು, ನಂಬಿಕೆ ಬರುವ ಮಾತುಗಳನ್ನು ನಂಬಿ, ಪೂಜೆ ಮಾಡಿ ಇಲ್ಲದಿದ್ದರೆ ಪ್ರಾಣ ಹೋಗುವ ಬೆದರಿಕೆಗೆ ಹೆದರಿದ ವೈಷ್ಣವಿ ರೂ. 15 ಲಕ್ಷ ಮೌಲ್ಯದ 165ಗ್ರಾಂ ಬಂಗಾರವನ್ನು ನೀಡಿದ್ದಾರೆ. ಈ ಕುರಿತು ವೈಷ್ಣವಿ ನಗರದ ಸಿಎನ್ ಇ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.