SHOCKING | ಲವ್ ಮಾಡೋದಿಲ್ಲ ಎಂದ ಶಿಕ್ಷಕಿ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೀತಿ ಮನವಿಯನ್ನು ತಿರಸ್ಕರಿಸಿದ ಅತಿಥಿ ಶಿಕ್ಷಕಿ ಮೇಲೆ ವರ್ಷದ ಹಿಂದೆ 10ನೇ ತರಗತಿ ಪಾಸ್​ ಆಗಿದ್ದ ಯುವಕ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಭೀಕರ ಘಟನೆ ಮಧ್ಯಪ್ರದೇಶದ ನರ್ಸಿಂಗ್ಪುರದಿಂದ ವರದಿಯಾಗಿದೆ.

ಘಟನೆ ಕುರಿತು ಮಾತನಾಡಿರುವ ಪೊಲೀಸರು, ಪ್ರೀತಿ ವಿಚಾರವಾಗಿ ಹದಿನೆಂಟುವರೆ ವರ್ಷದ ಯುವಕ ಈ ಕೃತ್ಯ ಎಸಗಿದ್ದು, ಆತನನ್ನು ಬಂಧಿಸಲಾಗಿದೆ. ಬಂಧಿತ ಯುವಕನನ್ನು ಸೂರ್ಯಾಂಶ್​ ಕೊಚರ್​ ಎಂದು ಗುರುತಿಸಲಾಗಿದೆ.

26 ವರ್ಷದ ಅತಿಥಿ ಶಿಕ್ಷಕಿ ಶೇ 25ರಷ್ಟು ಸುಟ್ಟ ಗಾಯಕ್ಕೆ ಒಳಗಾಗಿದ್ದು, ಅವರನ್ನು ಜಬಲ್ಪುರ್​ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಡಿಎಸ್​ಪು ಸಂದೀಪ್​ ಭೂರಿಯಾ ಮಾತನಾಡಿ, ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ನಡೆಸಿದಾಗ ಈ ಘಟನೆಗೆ ಪ್ರೀತಿ ವಿಚಾರ ಕಾರಣವಾಗಿದೆ ಎಂದು ತಿಳಿದು ಬಂದಿದ್ದು, ಹೇಳಿಕೆ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!