ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುದುಚೆರಿಯ ರೆಡ್ಡಿಯಾರ್ಪಾಳ್ಯಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಹನ್ನೊಂದನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಇರಿದ ಘಟನೆ ನಡೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ನಿಂದಿಸಿದ್ದಾನೆಂದು ಸಹಪಾಠಿ ಮೇಲೆ ಆಕ್ರೋಶದಿಂದ ಶಾಲೆಗೆ ಚಾಕು ತೆಗೆದುಕೊಂಡು ಹೋಗಿ ಅವನ ಜೊತೆ ವಾದ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ನಂತರ ತಪಾಸಣೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಯ ಬ್ಯಾಗ್ನಲ್ಲಿ ದೇಶೀಯ ನಿರ್ಮಿತ ಬಾಂಬ್ಗಳು ಸಹ ಪತ್ತೆಯಾಗಿವೆ.
ಚಾಕುವಿನ ಇರಿತಕ್ಕೆ ಒಳಗಾದ ಬಾಲಕ ಸೋಷಿಯಲ್ ಮೀಡಿಯಾದಲ್ಲಿ ಹಲ್ಲೆ ಮಾಡಿದ ಸಹಪಾಠಿಗೆ ಕಳೆದ ಕೆಲ ಸಮಯಗಳಿಂದ ಅವಮಾನವಾಗುವಂತಹ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ. ಇದರಿಂದ ಬಾಲಕ ಅವಮಾನಕ್ಕೊಳಗಾಗಿದ್ದ. ನಿನ್ನೆ ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಐಡಿ ರಚಿಸಿದವನ ಬಳಿ ಬಂದು ಆತನಿಗೆ ಬೈದಿದ್ದಾನೆ. ವಾದ-ವಿವಾದ ಬೆಳೆಯುತ್ತಿದ್ದಾಗ ಬೇರೆ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಬಾಲಕ ಸಿಟ್ಟಿನಿಂದ ಚಾಕುವಿನಿಂದ ಇರಿದಿದ್ದಾನೆ. ಆಗ ಶಿಕ್ಷಕರು ತರಗತಿಗೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗಾಯಗೊಂಡ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅವನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಶಾಲಾ ಆಡಳಿತ ಮಂಡಳಿಯು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತು, ಅವರು ಸ್ಫೋಟಕಗಳನ್ನು ವಶಪಡಿಸಿಕೊಂಡು ವಿದ್ಯಾರ್ಥಿಯನ್ನು ವಶಕ್ಕೆ ಪಡೆದರು. ಆತನನ್ನು ಬಾಲ ನ್ಯಾಯ ಮಂಡಳಿಗೆ ಉಲ್ಲೇಖಿಸಲಾಗಿದೆ.