ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಕಾಲೇಜೊಂದರಲ್ಲಿ ಯುವತಿಯೊಬ್ಬಳು ಮಾದಕ ನೃತ್ಯ ಮಾಡಿದ್ದು ಕಾಲೇಜಿಗೆ ನೊಟೀಸ್ ನೀಡಲಾಗಿದೆ.
ಪೇಶಾವರದ ಎನ್‌ಸಿಎಸ್ ಕಾಲೇಜು ಕಾರ್ಯಕ್ರಮದಲ್ಲಿ ಸಂಗೀತ ಸಂಜೆ ಏರ್ಪಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿನಿ ಮಾದಕ ಉಡುಗೆಯಲ್ಲಿ ಪಾಶ್ಚಿಮಾತ್ಯ ಹಾಡು ಹೇಳುತ್ತಾ ನೃತ್ಯ ಮಾಡಿದ್ದಾಳೆ.
ವಿದ್ಯಾರ್ಥಿಗಲು ಆಕೆಗೆ ಬೆಂಬಲ ನೀಡಿರುವುದು ವಿಡಿಯೋದಲ್ಲಿ ಕಾಣಸಿಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವೈದ್ಯಕೀಯ ವಿಶ್ವವಿದ್ಯಾಲಯ ಎನ್‌ಸಿಎಸ್ ಕಾಲೇಜಿಗೆ ನೊಟೀಸ್ ನೀಡಿದೆ. ಇದರ ಬಗ್ಗೆ ಕಾಲೇಜಿನ ನಿರ್ದೇಶಕರು ಉತ್ತರ ನೀಡಬೇಕು ಎಂದು ತಾಕೀತುಮಾಡಿದೆ.
#Peshawar pic.twitter.com/CkxG7G1xWy
— Muhammad Faheem (@MeFaheem) October 20, 2022