ಪ್ರಧಾನಿ ಮೋದಿ ನೋಡಲು ಕಾತರರಾದ ವಿದ್ಯಾರ್ಥಿಗಳು: ಯುವಜನೋತ್ಸವ ಉದ್ಘಾಟನೆಗೆ ಕ್ಷಣಗಣನೆ

ಹೊಸದಿಗಂತ ವರದಿ ಹುಬ್ಬಳ್ಳಿ:

ನಗರದ ರೈಲ್ವೆ ಮೈದಾನದಲ್ಲಿ ನಡೆಯಲಿರುವ 26 ನೇ ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನಾ ಸಮಾರಂಭ ಕ್ಷಣಗಣನೆ ಆರಂಭವಾಗಿದೆ. ಸಾವಿರಾರೂ ಕಾಲೇಜು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರನ್ನು ನೋಡಲು ಹಾಗೂ ಅವರ ಭಾಷಣ ಕೇಳಲು ಕಾತರರಾಗಿದ್ದಾರೆ.

ಅದರ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ನೃತ್ಯ, ಯೋಗಾಸನ, ಭರತ್ಯ ನಾಟ್ಯ ನೃತ್ಯಗಳು ನೋಡಗರ ಗಮನ ಸೆಳೆದವು. ಯುವಜನತೆ ಹಾಗೂ ವಿದ್ಯಾರ್ಥಿಗಳು ಮೋದಿ ಮೋದಿ ಎಂಬ ಘೋಷಣೆಗಳು ಮುಗಿಲ ಮುಟ್ಟಿದವು. ಕಾರ್ಯಕ್ರಮಕ್ಕೆ ಬರುವವರನ್ನು ಪೊಲೀಸರು ಮೈದಾನದ ಎದುರಿಗೆ ಸೂಕ್ತವಾಗಿ ಪರಿಶೀಲಿಸುತ್ತಿದ್ದರು. ಅಷ್ಟೇ ಭದ್ರತೆ ದೃಷ್ಟಿಯಿಂದ ಪೊಲೀಸರು ಮೈದಾನ ಸುತ್ತವರಿದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!