ದೈಹಿಕ ಆರೋಗ್ಯಕ್ಕೆ ಕೊಡುವಷ್ಟು ಪ್ರಾಮುಖ್ಯತೆ ಮಾನಸಿಕ ಆರೋಗ್ಯಕ್ಕೆ ಯಾರೂ ನೀಡುವುದಿಲ್ಲ. ಓದು, ಕೆಲಸ, ಮದುವೆ, ಮಕ್ಕಳು ಹೀಗೆ ಜೀವನವಿಡೀ ಒಂದಲ್ಲಾ ಒಂದು ಕಮಿಟ್ಮೆಂಟ್ನಲ್ಲಿ ಕಳೆದು ಹೋಗುತ್ತೇವೆ, ಆದರೆ ನಮ್ಮ ಖುಷಿ ಬಗ್ಗೆ ಯಾರು ಗಮನ ಕೊಡ್ತಾರೆ? ಸ್ಯಾಟಿಸ್ಫ್ಯಾಕ್ಷನ್ ಅನ್ನೋದು ತುಂಬಾ ಮುಖ್ಯ, ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಒಂದಕ್ಕೊಂದು ಸಂಬಂಧಿಸಿದೆ. ನಮ್ಮನ್ನು ನಾವು ಖುಷಿಯಾಗಿಡೋದು ಹೇಗೆ?
ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ, ಅನುಭವಿಸಿ.
ನಿಮಗೆ ಏನು ಸರಿ ಅನಿಸುತ್ತದೆಯೋ ಅದನ್ನೇ ಮಾಡಿ.
ಯಾವಾಗಲೂ ನಿಮ್ಮ ಜೀವನಕ್ಕೆ ಗ್ರೇಟ್ಫುಲ್ ಆಗಿರಿ. ನಿಮ್ಮ ಜೀವನ ಎಷ್ಟೊಂದು ಜನರ ಕನಸು.
ನಿಮ್ಮನ್ನು ನೀವು ಮತ್ತೊಬ್ಬರಿಗೆ ಕಂಪೇರ್ ಮಾಡಿಕೊಳ್ಳಬೇಡಿ.
ಈ ಹಿಂದೆ ನೀವು ಮಾಡಿದ ತಪ್ಪಿಗೆ ಪಶ್ಚತ್ತಾಪ ಕೊಟ್ಟು ಸುಮ್ಮನಾಗಿ, ಪದೆ ಪದೆ ಅದನ್ನೇ ಮನಸಿನಲ್ಲಿ ಇಟ್ಟುಕೊಂಡು ಕೊರಗಬೇಡಿ.
ಒಬ್ಬಂಟಿಯಾಗಿ ಕೊರಗಿ ನಿಮ್ಮನ್ನು ನೀವು ಶಿಕ್ಷಿಸಿಕೊಳ್ಳಬೇಡಿ.
ಪ್ರತಿದಿನ ಒಬ್ಬರಿಗಾದರೂ ಸಹಾಯ ಮಾಡಿ.
ನಿಮ್ಮ ಆರೋಗ್ಯವೇ ಮೊದಲ ಆಯ್ಕೆಯಾಗಿರಿ.
ಜೀವನ ನಿಮಗೆ ಕೊಟ್ಟಿರುವ ಪುಟ್ಟ ಖುಷಿಗಳನ್ನು ಆನಂದಿಸಿ.
ನಿಮಗೆಲ್ಲಿ ಗೌರವ ಇಲ್ಲವೋ ಅಲ್ಲಿ ಇರಬೇಡಿ.