ಗುರು ರಾಯರಿಗೆ ತಿರುಪತಿ ದೇಗುಲದ ಶೇಷ ವಸ್ತ್ರ ಸಮರ್ಪಿಸಿದ ಸುಬುಧೇಂದ್ರ ತೀರ್ಥ ಶ್ರೀ

ಹೊಸದಿಗಂತ ವರದಿ, ರಾಯಚೂರು:

ತಿರುಪತಿ ತಿರುಮಲ ದೇವಸ್ಥಾನದಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಅಂಗವಾಗಿ ಮಂತ್ರಾಲಯಕ್ಕೆ ಆಗಮಿಸಿದ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು.

ಶ್ರೀ ಮಠದ ಆವರಣದಿಂದ ಸಕಲ ವಾಧ್ಯಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷ ವಸ್ತ್ರವನ್ನು ಸ್ವೀಕರಿಸಿ ತಲೆಯ ಮೇಲೆ ಹೊತ್ತು ಮೂಲ ವೃಂದಾವನ ಪ್ರದಕ್ಷಿಣೆ ಮಾಡುವ ಮೂಲಕ ರಾಯರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಬುಧೇಂದ್ರ ಶ್ರೀಗಳು, ಇಂದು ಭೂ ಲೋಕದ ಒಡೆಯ ಶ್ರೀನಿವಾಸ ಶೇಷ ವಸ್ತ್ರದ ಮೂಲಕ ಗುರುರಾಯರ ಸನ್ನಿಧಾನಕ್ಕೆ ಬಂದಿದ್ದಾನೆ, ಕಳೆದ ೩೫೨ ವರ್ಷಗಳಿಂದ ಗುರುರಾಯರ ಆರಾಧನೆ ಸಮಯದಲ್ಲಿ ಪ್ರತಿ ವರ್ಷ ತಿರುಪತಿಯ ಶ್ರೀನಿವಾಸನ ಸನ್ನಿಧಿಯಿಂದ ಶೇಷ ವಸ್ತ್ರವನ್ನು ಅಲ್ಲಿನ ದೇವಸ್ಥಾನ ಆಡಳಿತ ಮಂಡಳಿ ತಪ್ಪದೆ ವಾಡಿಕೆ ತಪ್ಪದೆ ಪಾಲಿಸುತ್ತ ಬಂದಿದ್ದು, ನಾಡ ನುಡಿಯಂತೆ ದೇವರು ಎಂದರೆ ತಿರುಪತಿ ತಿಮ್ಮಪ್ಪ ಗುರುಗಳು ಎಂದರೆ ಮಂತ್ರಾಲಯ ರಾಗಪ್ಪ ಎನ್ನುವ ಹಾಗೆ ತಿರುಪತಿ ಮಂತ್ರಾಲಯ ನಡುವೆ ಅವಿನಾವ ಸಂಬoಧ ಹೊಂದಿದೆ ಎಂದರು.

ತಿರುಪತಿ ತಿರುಮಲ ದೇವಸ್ಥಾನ – ತಿರುಪತಿ ಜೆ. ಇ. ಒ. ಶ್ರೀ ವೀರ ಬ್ರಮಹೇಂದ್ರ ಮಾತನಾಡಿ ಇಂದು ಗುರುರಾಯರ ಮದ್ಯಾರಾಧನೆ ಸಮಯದಲ್ಲಿ ತಿರುಪತಿಯಿಂದ ಶೇಷ ವಸ್ತ್ರ ನೀಡುವ ಪರಂಪರೆ ನಡೆದುಕೊಂಡು ಬಂದಿದ್ದು, ಇಂದು ನಾವು ತಿರುಪತಿಯಿಂದ ತಂದ ಶೇಷ ವಸ್ತ್ರವನ್ನು ಶ್ರೀ ಗಳ ಮೂಲಕ ಗುರುರಾಯರಿಗೆ ಅರ್ಪಿಸಿದ್ದೆವೆ ಎಂದರು.

ಈ ಸಂದರ್ಭದಲ್ಲಿ ತಿರುಪತಿ ತಿರುಮಲ ವಿದ್ವಾನ ವಾದಿರಾಜ ಆಚಾರ್ಯ, ವಿದ್ವಾನ ಸುಧೀಂದ್ರ ಅಚಾರ್ಯ, ಧರಶ್ರೀ ಆಚಾರ್ಯ, ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ ಶ್ರಿನಿವಾಸರಾವ್, ವೆಂಕಟೇಶ್ ಜೋಶಿ, ಗುರುಸಾರಭೌಮ ವಿದ್ಯಾಪೀಠದ ಪ್ರಚಾರ್ಯ ರಮಣರಾವ, ಶ್ರೀ ಮಠದ ಮಾಧ್ಯಮ ಉಸ್ತುವಾರಿ ಶ್ರೀನಿಧಿ ಸೇರಿದಂತೆ ಗುರುಸಾರಭೌಮ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!