ಚಿತ್ರದುರ್ಗದಲ್ಲಿ ನಡೆದ ‘ಮರು ಬಳಕೆ ಉಡಾವಣಾ ವಾಹನ’ ಯಶಸ್ವಿ ಪ್ರಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (ಆರ್‌ಎಲ್‌ವಿ–ಎಲ್‌ಇಎಕ್ಸ್) ಲ್ಯಾಂಡಿಂಗ್‌ ಪರೀಕ್ಷೆಯನ್ನು ಇಂದು ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ನಡೆಸಿತು.

ಇಂದು ಮುಂಜಾನೆ ಚಿತ್ರದುರ್ಗದಲ್ಲಿರುವ ರಕ್ಷಣಾ ಇಲಾಖೆಯ ರಕ್ಷಣಾ ಇಲಾಖೆಯ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಸ್ಥಾಪಿಸಿದ್ದ ಪ್ರಥಮ ರನ್‌ವೇನಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.

ವಾಯುಪಡೆ ಮತ್ತು ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಈ ಪ್ರಯೋಗವನ್ನು ನಡೆಸಲಾಯಿತು ಎಂದು ಇಸ್ರೊ ಹೇಳಿದೆ.

ಪರೀಕ್ಷೆಯ ವೇಳೆ ಪುನರ್‌ ಬಳಕೆಯ ಉಡಾವಣಾ ವಾಹನದ ಕವಚವನ್ನು ಭಾರತೀಯ ವಾಯುಪಡೆಯ ಚಿಕೂನ್‌ ಹೆಲಿಕಾಪ್ಟರ್‌ ಮೂಲಕ ಮೇಲ್ಮೈನಿಂದ 4.5ಕಿ.ಮೀ ಎತ್ತರದಿಂದ ರನ್‌ ವೇಗೆ ಇಳಿ ಬಿಡಲಾಗುವುದು. ಹೀಗೆ ಇಳಿ ಬಿಟ್ಟ ಬಳಿಕ ಕವಚವು ರನ್‌ವೇಯಲ್ಲಿ ಜಾರಿಕೊಂಡು ಚಲಿಸಲಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!