ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರತಿ ಮೂಲೆಯಲ್ಲೂ ನರೇಂದ್ರ ಮೋದಿ ಅಭಿಮಾನಿ ಇದ್ದೆ ಇದ್ದಾರೆ. ಮೋದಿ ಒಳಿತಿಗಾಗಿ ಹಲವು ಶಪಥ, ವೃತ ಕೈಗೊಂಡವರಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ರಾಂಪಾಲ್ ಕಶ್ಯಪ್ ಮೋದಿಗಾಗಿ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಓಡಾಡುವ ಶಪಥ ಮಾಡಿದ್ದ.
ಕಳೆದ 14 ವರ್ಷಗಳಿಂದ ಕಶ್ಯಪ್ ಇದೇ ಶಪಥ ಪಾಲಿಸಿಕೊಂಡು ಬಂದಿದ್ದಾರೆ. ಇದೀಗ ಪ್ರಧಾನಿ ಮೋದಿ ರಾಂಪಾಲ್ ಕಶ್ಯಪ್ ಭೇಟಿಯಾಗಿದ್ದಾರೆ. ಈ ವೇಳೆ ಮೋದಿ ಹೊಸ ಶೂ ಕೊಡಿಸಿ ಧರಿಸುವಂತೆ ಸೂಚಿಸಿದ್ದಾರೆ. ಮೋದಿ ಕೈಯಾರೆ ಕೊಟ್ಟ ಶೂ ಧರಿಸಿದ ರಾಂಪಾಲ್ ಶಪಥ ಅಂತ್ಯಗೊಳಿಸಿದ್ದಾರೆ.
ರಾಂಪಾಲ್ ಕಶ್ಯಪ್ ನೋಡಿದ ಕೂಡಲೇ ಪ್ರಧಾನಿ ಮೋದಿ, ಯಾಕೇ ರೀತಿ ಮಾಡಿದ್ದೀರಿ, ನಿಮಗೆ ನೀವು ಯಾಕೆ ಈ ರೀತಿ ಕಷ್ಟ ಕೊಡುತ್ತೀರಿ ಎಂದು ಮೋದಿ ಕೇಳಿದ್ದಾರೆ. ಅದಕ್ಕೆ ರಾಂಪಾಲ್ ಕಶ್ಯಪ್, ನೀವು ಪ್ರಧಾನಿಯಾಗಬೇಕು, ಅಧಿಕಾರ ನಡೆಸಬೇಕು ಅನ್ನೋ ಹಂಬಲದಲ್ಲಿ ಈ ಶಪಥ ಮಾಡಿದ್ದೇನೆ. ನೀವು ಪ್ರಧಾನಿಗಿರಬೇಕು ಎಂದು ರಾಂಪಾಲ್ ಕಶ್ಯಪ್ ಉತ್ತರಿಸಿದ್ದಾರೆ.